ಟಿ20ಯಲ್ಲಿ ಅಧಿಕ ಮೇಡನ್ ಓವರ್ ಬೌಲ್ ಮಾಡಿರುವ ಬೌಲರ್ ಯಾರು ಗೊತ್ತಾ?

13 september 2024

Pic credit: Google

ಪೃಥ್ವಿ ಶಂಕರ

Pic credit: Google

ಟಿ20 ಕ್ರಿಕೆಟ್​ನಲ್ಲಿ ರನ್​ಗಳಿಗೆ ಕಡಿವಾಣ ಹಾಕುವುದು ಬೌಲರ್​ಗಳಿಗೆ ಕಠಿಣ ಸವಾಲಾಗಿರುತ್ತದೆ. ಅದರಲ್ಲೂ ಮೇಡನ್ ಓವರ್ ಬೌಲ್ ಮಾಡುವುದೆಂದರೆ ಕಷ್ಟದ ಕೆಲಸವೇ ಸರಿ.

Pic credit: Google

ಆದಾಗ್ಯೂ ಟಿ20 ಕ್ರಿಕೆಟ್​ನಲ್ಲಿ ಹಲವು ಬೌಲರ್​ಗಳು ಮೇಡನ್ ಓವರ್ ಬೌಲ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ. ಅಂತಹ ಟಾಪ್ 5 ಬೌಲರ್​ಗಳ ವಿವರ ಇಲ್ಲಿದೆ.

Pic credit: Google

ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಮೇಡನ್‌ಗಳನ್ನು ಎಸೆದವರಲ್ಲಿ ಜಸ್ಪ್ರೀತ್ ಬುಮ್ರಾ 5 ನೇ ಸ್ಥಾನದಲ್ಲಿದ್ದಾರೆ. ಆಡಿರುವ 233 ಪಂದ್ಯಗಳಲ್ಲಿ 22 ಮೇಡನ್ ಓವರ್ ಬೌಲಿಂಗ್ ಮಾಡಿದ್ದಾರೆ.

Pic credit: Google

ಟೀಮ್ ಇಂಡಿಯಾದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಟಿ20ಯಲ್ಲಿ ಅತಿ ಹೆಚ್ಚು ಮೇಡನ್ ಎಸೆದವರಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. 285 ಪಂದ್ಯಗಳಲ್ಲಿ 24 ಮೇಡನ್ ಓವರ್ ಬೌಲಿಂಗ್ ಮಾಡಿದ್ದಾರೆ.

Pic credit: Google

ಪಾಕಿಸ್ತಾನದ ವೇಗದ ಬೌಲರ್ ಮೊಹಮ್ಮದ್ ಅಮೀರ್ 302 ಟಿ20 ಪಂದ್ಯಗಳಲ್ಲಿ 25 ಮೇಡನ್ ಓವರ್‌ಗಳೊಂದಿಗೆ ಈ ವಿಷಯದಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

Pic credit: Google

ಬಾಂಗ್ಲಾದೇಶದ ಎಡಗೈ ಸ್ಪಿನ್ನರ್ ಶಕೀಬ್ ಅಲ್ ಹಸನ್ 444 ಟಿ20 ಪಂದ್ಯಗಳಲ್ಲಿ 26 ಮೇಡನ್ ಓವರ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.

Pic credit: Google

ಟಿ20ಯಲ್ಲಿ ಅತಿ ಹೆಚ್ಚು ಮೇಡನ್ ಓವರ್ ಬೌಲ್ ಮಾಡಿದ ದಾಖಲೆಯನ್ನು ಸುನಿಲ್ ನರೈನ್ ಹೊಂದಿದ್ದಾರೆ. 522 ಟಿ20 ಪಂದ್ಯಗಳಲ್ಲಿ 30 ಮೇಡನ್ ಓವರ್ ಬೌಲಿಂಗ್ ಮಾಡಿದ್ದಾರೆ.