ಬ್ಯಾಟಿಂಗ್ನಲ್ಲಿ ಕೊಹ್ಲಿ- ರೋಹಿತ್ಗಿಂತ ಬುಮ್ರಾ ಬೆಸ್ಟ್
7 December 2024
Pic credit: Google
ಪೃಥ್ವಿ ಶಂಕರ
ಪರ್ತ್ ನಂತರ ಅಡಿಲೇಡ್ ಟೆಸ್ಟ್ನಲ್ಲೂ ಭಾರತ ತಂಡದ ಬ್ಯಾಟಿಂಗ್ ಸಂಪೂರ್ಣ ವಿಫಲವಾಗಿದ್ದು ಎರಡನೇ ಟೆಸ್ಟ್ ಸೋಲುವ ಆತಂಕದಲ್ಲಿದೆ.
Pic credit: Google
ಅಡಿಲೇಡ್ ಟೆಸ್ಟ್ನಲ್ಲೂ ಟೀಂ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ನಿರಾಸೆ ಮೂಡಿಸಿದರು
Pic credit: Google
ಪರ್ತ್ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಶತಕ ಸಿಡಿಸಿದ್ದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಎರಡನೇ ಟೆಸ್ಟ್‌ನಲ್ಲಿ ಯಾವುದೇ ಪರಿಣಾಮ ಬೀರಲಿಲ್ಲ.
Pic credit: Google
ತಂಡಕ್ಕೆ ವಾಪಸಾದ ನಾಯಕ ರೋಹಿತ್ ಶರ್ಮಾ ಕೂಡ ಎರಡೂ ಇನ್ನಿಂಗ್ಸ್‌ಗಳಲ್ಲಿ ಕೇವಲ 9 ರನ್ ಕಲೆಹಾಕಲಷ್ಟೇ ಶಕ್ತರಾದರು.
Pic credit: Google
ಇದರೊಂದಿಗೆ ಈ ಇಬ್ಬರು ಆಟಗಾರರು ಈ ವರ್ಷ ಅತಿ ಹೆಚ್ಚು ಬಾರಿ ಸಿಂಗಲ್ ಡಿಜಿಟ್ ಸ್ಕೋರ್‌ಗೆ ವಿಕೆಟ್ ಒಪ್ಪಿಸಿದ ಭಾರತೀಯ ಬ್ಯಾಟರ್ಸ್ಗಳೆನಿಸಿಕೊಂಡಿದ್ದಾರೆ.
Pic credit: Google
ನಾವು ಎಲ್ಲಾ ಮೂರು ಸ್ವರೂಪಗಳ ಬಗ್ಗೆ ಒಟ್ಟಿಗೆ ಮಾತನಾಡಿದರೆ, ಈ ವರ್ಷ ವಿರಾಟ್ ಆಡಿರುವ 28 ಇನ್ನಿಂಗ್ಸ್‌ಗಳಲ್ಲಿ 13 ಬಾರಿ ಒಂದಂಕಿಗೆ ಸುಸ್ತಾಗಿದ್ದಾರೆ.
Pic credit: Google
ಇತ್ತ ರೋಹಿತ್ ಶರ್ಮಾ ಕೂಡ 36 ಇನ್ನಿಂಗ್ಸ್‌ಗಳಲ್ಲಿ 13 ಒಂದಂಕಿಗೆ ವಿಕೆಟ್ ಒಪ್ಪಿಸಿದ್ದಾರೆ.
Pic credit: Google
ಈ ಇಬ್ಬರಿಗೂ ಹೋಲಿಸಿದರೆ ಜಸ್ಪ್ರೀತ್ ಬುಮ್ರಾ ಆಡಿರುವ 16 ಇನ್ನಿಂಗ್ಸ್‌ಗಳಲ್ಲಿ ಕೇವಲ 11 ಬಾರಿ ಸಿಂಗಲ್ ಡಿಜಿಟ್‌ನಲ್ಲಿ ಔಟಾಗಿದ್ದಾರೆ.
Pic credit: Google
Pic credit: Google
ಪಿಂಕ್ ಬಾಲ್ ಬೆಲೆ ಎಷ್ಟು? ಅದರ ವಿಶೇಷತೆ ಬಗ್ಗೆ ನಿಮಗೆಷ್ಟು ಗೊತ್ತು?