ಮತ್ತೆ ಕೊಹ್ಲಿಯ ಬೆನ್ನೇರಿದ ಶತಕಗಳ ಬರ

26  october 2024

Pic credit: Google

ಪೃಥ್ವಿ ಶಂಕರ

ಪುಣೆ ಟೆಸ್ಟ್‌ನಲ್ಲಿ ಸೋಲುವ ಮೂಲಕ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಕಳೆದುಕೊಂಡಿದೆ. ಈ ಸರಣಿ ಸೋಲಿಗೆ ತಂಡದ ಬ್ಯಾಟಿಂಗ್‌ ವಿಭಾಗದ ವೈಫಲ್ಯವೇ ಕಾರಣವಾಗಿತ್ತು. ಅದರಲ್ಲೂ ಕೊಹ್ಲಿ ಬ್ಯಾಟ್ ಸೈಲೆಂಟ್ ಆಗಿದ್ದು ಸರಣಿ ಸೋಲಿಗೆ ಕಾರಣವಾಯಿತು.

Pic credit: Google

ವಾಸ್ತವವಾಗಿ ಕಳೆದ ಕೆಲವು ದಿನಗಳಿಂದ ಟೆಸ್ಟ್ ಪಂದ್ಯಗಳಲ್ಲಿ ರನ್ ಬರ ಎದುರಿಸುತ್ತಿರುವ ಕೊಹ್ಲಿ, ಶತಕ ಸಿಡಿಸಿ ಸಾಕಷ್ಟು ದಿನಗಳಾಗಿವೆ.

Pic credit: Google

ಪುಣೆ ಟೆಸ್ಟ್​ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೇವಲ 1 ರನ್ ಗಳಿಸಿದರೆ, 2ನೇ ಇನ್ನಿಂಗ್ಸ್​ನಲ್ಲಿ 17 ರನ್​ಗಳಿಗೆ ಸುಸ್ತಾದರು. ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್​ನಲ್ಲಿ 0 ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ 70 ರನ್ ಬಾರಿಸಿದ್ದರು.

Pic credit: Google

ಬಹಳ ದಿನಗಳ ನಂತರ ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಮೂಲಕ ತಂಡಕ್ಕೆ ಪುನರಾಗಮನ ಮಾಡಿದ್ದ ವಿರಾಟ್ ಕೊಹ್ಲಿ ಮೇಲೆ ಅಭಿಮಾನಿಗಳು ಶತಕದ ನಿರೀಕ್ಷೆಯಲ್ಲಿದ್ದರು. ಆದರೆ ಯಾವುದೇ ದೊಡ್ಡ ಇನ್ನಿಂಗ್ಸ್ ಆಡಲು ಸಾಧ್ಯವಾಗಲಿಲ್ಲ.

Pic credit: Google

ಒಂದು ಕಾಲದಲ್ಲಿ ಒಂದರ ಹಿಂದೆ ಒಂದರಂತೆ ಶತಕಗಳನ್ನು ಬಾರಿಸಿದ್ದ ವಿರಾಟ್ ಟೆಸ್ಟ್‌ನ ಕೊನೆಯ 10 ಇನ್ನಿಂಗ್ಸ್‌ಗಳಲ್ಲಿ ಕೇವಲ 1 ಅರ್ಧ ಶತಕ ಮಾತ್ರ ಬಾರಿಸಿದ್ದಾರೆ.

Pic credit: Google

2019 ರಿಂದ ವಿರಾಟ್ ಕೊಹ್ಲಿ ಜೀವನದಲ್ಲಿ ಶತಕಗಳ ಬರ ಇತ್ತು. ಯಾವುದೇ ಮಾದರಿಯಲ್ಲಿ ಶತಕ ಗಳಿಸಲು ಸಾಧ್ಯವಾಗಲಿಲ್ಲ. ಮುಂದಿನ ಶತಕಕ್ಕಾಗಿ ಅವರು 83 ಇನ್ನಿಂಗ್ಸ್ ಮತ್ತು 1080 ದಿನ ಕಾಯಬೇಕಾಯಿತು.

Pic credit: Google

ವಿರಾಟ್ ಕೊಹ್ಲಿ ತಮ್ಮ ಕೊನೆಯ ಟೆಸ್ಟ್ ಶತಕವನ್ನು ವೆಸ್ಟ್ ಇಂಡೀಸ್ ವಿರುದ್ಧ ಜುಲೈ 20, 2023 ರಂದು ಸಿಡಿಸಿದ್ದರು. ಅದಕ್ಕೂ ಹಿಂದೆ ಮಾರ್ಚ್ 2023 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಶತಕವನ್ನು ಗಳಿಸಿದರು.

Pic credit: Google

ಇದೀಗ ವಿರಾಟ್ ಕೊಹ್ಲಿ ಟೆಸ್ಟ್‌ನಲ್ಲಿ ಶತಕ ಬಾರಿಸಿ 460 ದಿನಗಳು ಕಳೆದಿವೆ. ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿ 596 ದಿನಗಳಾಗಿವೆ. ಹೀಗಿರುವಾಗ ಮತ್ತೆ ಶತಗಳ ಬರಗಾಲ ಎದುರಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

Pic credit: Google