ಮುಂಬೈನಲ್ಲಿ ವಿರಾಟ್ ಕೊಹ್ಲಿ ಟೆಸ್ಟ್ ದಾಖಲೆ ಹೇಗಿದೆ?

29 october 2024

Pic credit: Google

ಪೃಥ್ವಿ ಶಂಕರ

ಬೆಂಗಳೂರು ಮತ್ತು ಪುಣೆ ನಂತರ ಇದೀಗ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಟೆಸ್ಟ್ ಮುಂಬೈನಲ್ಲಿ ನಡೆಯಲಿದೆ.

Pic credit: Google

ಮೊದಲೆರಡು ಟೆಸ್ಟ್‌ಗಳಲ್ಲಿ ಸೋತಿರುವ ಭಾರತ ತಂಡ ತನ್ನ ವೈಟ್ ವಾಶ್ ಮುಖಭಂಗದಿಂದ ಪಾರಾಗುವ ಇರಾದರೆಯೊಂದಿಗೆ ನವೆಂಬರ್ 1 ರಿಂದ ವಾಂಖೆಡೆ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್​ಗೆ ಕಣಕ್ಕಿಳಿಯಲಿದೆ.

Pic credit: Google

ಮೊದಲೆರಡು ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾದ ಅನುಭವಿ ಬ್ಯಾಟ್ ವಿರಾಟ್ ಕೊಹ್ಲಿ ಲಯದಲ್ಲಿ ಕಾಣಿಸಿಕೊಂಡಿರಲಿಲ್ಲ.

Pic credit: Google

ಆದರೀಗ ತಂಡವನ್ನು ಮುಜುಗರದಿಂದ ಪಾರು ಮಾಡಲು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ವಿರಾಟ್ ಕೊಹ್ಲಿ  ಅಬ್ಬರಿಸಲೇಬೇಕಿದೆ.

Pic credit: Google

ಇದಕ್ಕೆ ಪೂರಕವಾಗಿ ಈ ಕ್ರೀಡಾಂಗಣದಲ್ಲಿ ಕೊಹ್ಲಿ ಅಂಕಿ ಅಂಶಗಳು ಉತ್ತಮವಾಗಿದ್ದು, ವಿರಾಟ್ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ ಐದು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

Pic credit: Google

ವಾಂಖೆಡೆ ಸ್ಟೇಡಿಯಂನಲ್ಲಿ ಐದು ಟೆಸ್ಟ್ ಪಂದ್ಯಗಳ ಎಂಟು ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೊಹ್ಲಿ ಪಡೆದಿದ್ದರು.

Pic credit: Google

ಈ ಎಂಟು ಇನ್ನಿಂಗ್ಸ್‌ಗಳಲ್ಲಿ 469 ರನ್ ಕಲೆಹಾಕಿರುವ ಕೊಹ್ಲಿ, ಈ ಮೈದಾನದಲ್ಲಿ ಅತ್ಯಧಿಕ 235 ರನ್​ಗಳ ಇನ್ನಿಂಗ್ಸ್ ಆಡಿದ್ದು, ಟೆಸ್ಟ್ ಶತಕವನ್ನೂ ಸಿಡಿಸಿದ್ದಾರೆ.

Pic credit: Google