WBBL 2024: ಹರ್ಮನ್, ಶಫಾಲಿ ರಿಚಾಗಿಲ್ಲ ಸ್ಥಾನ; 6 ಭಾರತೀಯರಿಗೆ ಅವಕಾಶ

1 september 2024

Pic credit: Google

ಪೃಥ್ವಿ ಶಂಕರ

Pic credit: Google

ಮುಂದಿನ ತಿಂಗಳಿನಿಂದ ಆಸ್ಟ್ರೇಲಿಯಾದಲ್ಲಿ ಮಹಿಳೆಯರ ಬಿಗ್ ಬ್ಯಾಷ್ ಲೀಗ್ ಆರಂಭವಾಗಲಿದೆ. ಈ ಲೀಗ್‌ಗಾಗಿ ಎಲ್ಲಾ ತಂಡಗಳು ತಮ್ಮ ತಂಡವನ್ನು ಸಿದ್ಧಪಡಿಸಿವೆ.

Pic credit: Google

ಈ ಬಾರಿ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಭಾರತದ ಒಟ್ಟು 6 ಆಟಗಾರರು ಆಡಲಿದ್ದಾರೆ. ಇದರಲ್ಲಿ ಸ್ಟಾರ್ ಬ್ಯಾಟ್ಸ್‌ಮನ್ ಸ್ಮೃತಿ ಮಂಧಾನ ಹೆಸರೂ ಸೇರಿದೆ.

Pic credit: Google

ಆದರೆ ಭಾರತೀಯ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಈ ಬಾರಿಯ ಮಹಿಳಾ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡುತ್ತಿಲ್ಲ.

Pic credit: Google

ಹರ್ಮನ್‌ಪ್ರೀತ್ ಕೌರ್ ಅವರನ್ನು ವಿದೇಶಿ ಡ್ರಾಫ್ಟ್‌ನಲ್ಲಿ ಸೇರಿಸಲಾಯಿತು. ಆದರೆ ಯಾವುದೇ ತಂಡವು ಅವರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ.

Pic credit: Google

ಕಳೆದ ಕೆಲವು ಸೀಸನ್‌ಗಳಲ್ಲಿ ಈ ಲೀಗ್‌ನ ಭಾಗವಾಗಿದ್ದ ಹರ್ಮನ್‌ಪ್ರೀತ್ ಅವರ ಹಳೆಯ ತಂಡ ಮೆಲ್ಬೋರ್ನ್ ರೆನೆಗೇಡ್ಸ್ ಕೂಡ ಅವರನ್ನು ಆಯ್ಕೆ ಮಾಡಲಿಲ್ಲ.

Pic credit: Google

ಸ್ಮೃತಿ ಮಂಧಾನ ಹೊರತಾಗಿ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್, ಶಿಖಾ ಪಾಂಡೆ, ಹೇಮಲತಾ ದಯಾಲನ್ ಮತ್ತು ಯಾಸ್ತಿಕಾ ಭಾಟಿಯಾ ಮುಂಬರುವ ಸೀಸನ್​ನಲ್ಲಿ ಆಡಲಿದ್ದಾರೆ.

Pic credit: Google

ಭಾರತೀಯ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಹೊರತುಪಡಿಸಿ, ಶೆಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರನ್ನು ಯಾವ ತಂಡ ಆಯ್ಕೆ ಮಾಡಲಿಲ್ಲ.