ಒಲಿಂಪಿಕ್ ಪದಕ ವಿಜೇತರಿಗೆ ಭಾರತ ಸರ್ಕಾರದಿಂದ ಸಿಗುವ ಹಣ, ಸವಲತ್ತುಗಳೇನು?

27 July 2024

Pic credit: Google

ಪೃಥ್ವಿ ಶಂಕರ

Pic credit: Google

ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವುದು ಯಾವುದೇ ಆಟಗಾರನಿಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಈ ಅಥ್ಲೀಟ್​ಗಳಿಗೆ ಗೆಲುವಿನ ಜತೆಗೆ ಬಹುಮಾನವಾಗಿ ಭಾರಿ ಗಾತ್ರದ ಹಣವೂ ಸಿಗುತ್ತದೆ.

Pic credit: Google

ಪದಕ ಗೆದ್ದ ಆಟಗಾರನಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಬಹುಮಾನ ಸಿಗುತ್ತದೆ. ಈ ಮೊತ್ತವು ರಾಜ್ಯಗಳಿಗೆ ಅನುಗುಣವಾಗಿ ಬದಲಾಗಬಹುದು.

Pic credit: Google

ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ವಿಜೇತರಿಗೆ ಕೇಂದ್ರ ಸರ್ಕಾರದಿಂದ 75 ಲಕ್ಷ ರೂ. ಬಹುಮಾನ ನೀಡಲಾಗುತ್ತದೆ.

Pic credit: Google

ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ವಿಜೇತರಿಗೆ ಕೇಂದ್ರ ಸರ್ಕಾರದಿಂದ 50 ಲಕ್ಷ ರೂ. ನಗದು ಬಹುಮಾನ ನೀಡಲಾಗುತ್ತದೆ.

Pic credit: Google

ಹಾಗೆಯೇ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ವಿಜೇತರಿಗೆ ಕೇಂದ್ರ ಸರ್ಕಾರದಿಂದ ಬಹುಮಾನವಾಗಿ 30 ಲಕ್ಷ ರೂ. ಸಿಗಲಿದೆ.

Pic credit: Google

ಇದಲ್ಲದೇ ಚಿನ್ನದ ಪದಕ ಗೆದ್ದ ಕ್ರೀಡಾಪಟುಗಳಿಗೆ ಸರ್ಕಾರ ಸರ್ಕಾರಿ ಉದ್ಯೋಗವನ್ನೂ ನೀಡುತ್ತದೆ.

Pic credit: Google

ಈ ಬಾರಿ ಕರ್ನಾಟಕದಿಂದ ಒಟ್ಟು 7 ಸ್ಪರ್ಧಿಗಳು ಒಲಿಂಪಿಕ್ಸ್​ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ಪದಕಕ್ಕಾಗಿ ಸೆಣೆಸಾಡಲಿದ್ದಾರೆ.

Pic credit: Google

ಈ ಬಾರಿಯ ಒಲಿಂಪಿಕ್ಸ್​ನಲ್ಲಿ ಪದಕ ಗೆಲ್ಲುವ ಕರ್ನಾಟಕದ ಸ್ಪರ್ಧಿಗಳಿಗೆ ರಾಜ್ಯ ಸರ್ಕಾರ 6 ಕೋಟಿ ರೂ. ನಗದು ಬಹುಮಾನ ಘೋಷಿಸಿದೆ.