ಆರಂಭಿಕನಾಗಿ ಅತಿ ಹೆಚ್ಚು ಶತಕ ಬಾರಿಸಿರುವ ಆಟಗಾರ ಯಾರು ಗೊತ್ತಾ?
28 october 2024
Pic credit: Google
ಪೃಥ್ವಿ ಶಂಕರ
ಸಚಿನ್ ತೆಂಡೂಲ್ಕರ್ ಆಗಿರಲಿ ಅಥವಾ ರೋಹಿತ್ ಶರ್ಮಾ ಆಗಿರಲಿ, ಟೀಂ ಇಂಡಿಯಾದ ಈ ಇಬ್ಬರು ದಿಗ್ಗಜರು ಆರಂಭಿಕರಾಗಿ ಕ್ರಿಕೆಟ್ ಲೋಕದಲ್ಲಿ ಸಂಚಲನ ಮೂಡಿಸಿದ್ದಾರೆ.
Pic credit: Google
ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಸಾಕಷ್ಟು ರನ್ ಗಳಿಸಿದ್ದಾರೆ. ಇತ್ತ ರೋಹಿತ್ ಶರ್ಮಾ ಕೂಡ ಎಲ್ಲಾ ಮೂರು ಸ್ವರೂಪಗಳಲ್ಲಿ ಆರಂಭಿಕರಾಗಿ ಕಮಾಲ್ ಮಾಡಿದ್ದಾರೆ.
Pic credit: Google
ಈ ಇಬ್ಬರೂ ಆರಂಭಿಕರಾಗಿ ಸಾಕಷ್ಟು ಶತಕಗಳನ್ನು ಗಳಿಸಿದ್ದಾರೆ. ಆದರೆ ಆರಂಭಿಕರಾಗಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ಆರಂಭಿಕರ ಪಟ್ಟಿಯಲ್ಲಿ ರೋಹಿತ್ ಅಥವಾ ಸಚಿನ್ ನಂಬರ್-1 ಆಗಿಲ್ಲ.
Pic credit: Google
ನಿನ್ನೆಯಷ್ಟೇ ಅಂದರೆ ಅಕ್ಟೋಬರ್ 27 ರಂದು 38 ನೇ ವರ್ಷಕ್ಕೆ ಕಾಲಿಟ್ಟ ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಈ ಅದ್ಭುತ ಸಾಧನೆ ಮಾಡಿದ್ದಾರೆ.
Pic credit: Google
ಈ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ವಾರ್ನರ್, ಎಲ್ಲಾ ಮೂರು ಸ್ವರೂಪಗಳಲ್ಲಿ ಆಸ್ಟ್ರೇಲಿಯಾ ಪರ ಆರಂಭಿಕರಾಗಿ ಕಣಕ್ಕಿಳಿದು ಒಟ್ಟು 49 ಶತಕಗಳನ್ನು ಬಾರಿಸಿದ್ದಾರೆ.
Pic credit: Google
ಸುಮಾರು 15 ವರ್ಷಗಳ ವೃತ್ತಿಜೀವನದಲ್ಲಿ, ವಾರ್ನರ್ ಏಕದಿನದಲ್ಲಿ 22 ಶತಕ, ಟೆಸ್ಟ್‌ನಲ್ಲಿ 26 ಶತಕ ಮತ್ತು ಟಿ20 ಅಂತರರಾಷ್ಟ್ರೀಯಗಳಲ್ಲಿ 1 ಶತಕವನ್ನು ಗಳಿಸಿದ್ದಾರೆ.
Pic credit: Google
45 ಶತಕ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಎರಡನೇ ಸ್ಥಾನದಲ್ಲಿದ್ದರೆ, ರೋಹಿತ್ 43 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
Pic credit: Google
Pic credit: Google
ಬಿಜಿಟಿ ಟೆಸ್ಟ್ ಸರಣಿಯಲ್ಲಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿ