ಪಾಕಿಸ್ತಾನದಲ್ಲಿ ಪಾಕ್ ಪಂದ್ಯದ ಪ್ರಸಾರವೇ ಇಲ್ಲ..!

26 December 2023

Author: ZAHIR

ಪಾಕ್​ ಪಂದ್ಯವಾಡುತ್ತಿದ್ದರೂ ಈ ಪಂದ್ಯದ ನೇರ ಪ್ರಸಾರ ಪಾಕಿಸ್ತಾನದಲ್ಲಿ ಬಿತ್ತರವಾಗುತ್ತಿಲ್ಲ. ಇದಕ್ಕೆ ಕಾರಣವೇನು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ...

ಕ್ರಿಕೆಟ್ ಪಂದ್ಯದ ಪ್ರಸಾರವಿಲ್ಲ

ಮೆಲ್ಬೋರ್ನ್​ನಲ್ಲಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ್ ತಂಡಗಳು 2ನೇ ಟೆಸ್ಟ್ ಪಂದ್ಯವಾಡುತ್ತಿದೆ. ಆದರೆ ಈ ಪಂದ್ಯವನ್ನು ಪಾಕಿಸ್ತಾನದಲ್ಲಿ ಪ್ರಸಾರ ಮಾಡುತ್ತಿಲ್ಲ.

ಆಸ್ಟ್ರೇಲಿಯಾ-ಪಾಕಿಸ್ತಾನ್ ಮ್ಯಾಚ್

ಆಸ್ಟ್ರೇಲಿಯಾ-ಪಾಕಿಸ್ತಾನ್ ನಡುವಣ ಪಂದ್ಯವನ್ನು ಸರ್ಕಾರಿ ಸ್ವಾಮ್ಯದ ಕ್ರೀಡಾ ಚಾನೆಲ್ PTV ಸ್ಪೋರ್ಟ್ಸ್​ನಲ್ಲಿ ಪ್ರಸಾರವಾಗಬೇಕಿತ್ತು. ಆದರೆ ಪಂದ್ಯ ಶುರುವಾದರೂ ಚಾನೆಲ್​ನಲ್ಲಿ ಈ ಪಂದ್ಯವನ್ನು ಪ್ರಸಾರ ಮಾಡಿಲ್ಲ.

ಪಿಟಿವಿ ಸ್ಪೋರ್ಟ್ಸ್​ನಲ್ಲಿಲ್ಲ ಪಂದ್ಯ

ಪಾಕಿಸ್ತಾನ ಸರ್ಕಾರವು ಬೆಟ್ಟಿಂಗ್ ಕಂಪನಿಗಳ ಜಾಹೀರಾತುಗಳನ್ನು ಪ್ರಸಾರ ಮಾಡದಂತೆ ಸ್ಥಳೀಯ ಚಾನೆಲ್​ಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದೆ.

ಇದಕ್ಕೇನು ಕಾರಣ?

ಆಸ್ಟ್ರೇಲಿಯಾ-ಪಾಕಿಸ್ತಾನ್ ನಡುವಣ ಟೆಸ್ಟ್ ಪಂದ್ಯಗಳ ವೇಳೆ ಬೆಟ್ಟಿಂಗ್ ಕಂಪೆನಿಗಳ ಲೋಗೋಗಳನ್ನು ನಿರಂತರವಾಗಿ ತೋರಿಸಲಾಗುತ್ತಿದೆ. ಹೀಗಾಗಿ ಪಂದ್ಯದ ನೇರ ಪ್ರಸಾರವನ್ನು ತಡೆ ಹಿಡಿಯಲಾಗಿದೆ.

ಜಾಹೀರಾತಿನಲ್ಲಿ ಬೆಟ್ಟಿಂಗ್ ಕಂಪೆನಿ

ಆಸ್ಟ್ರೇಲಿಯಾ ಆಯೋಜಿಸಿರುವ ಸರಣಿಯಲ್ಲಿ ಬೆಟ್ಟಿಂಗ್ ಜಾಹೀರಾತುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಪಾಕಿಸ್ತಾನದಲ್ಲಿ ಈ ಸರಣಿಯನ್ನು ನೇರ ಪ್ರಸಾರ ಮಾಡುತ್ತಿಲ್ಲ. ಇದರಿಂದ ಅಲ್ಲಿನ ಕ್ರಿಕೆಟ್ ಪ್ರೇಮಿಗಳು ನಿರಾಶರಾಗಿದ್ದಾರೆ.

ಪಾಕ್​ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆ

ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ್ ನಡುವೆ 3 ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದೆ. ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಮುಗಿದಿದ್ದು, ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಜಯ ಸಾಧಿಸಿದೆ.

3 ಪಂದ್ಯಗಳ ಸರಣಿ

ಇದೀಗ ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯವು ಪಾಕಿಸ್ತಾನ್ ಪಾಲಿಗೆ ನಿರ್ಣಾಯಕ. ಈ ಪಂದ್ಯದಲ್ಲಿ ಗೆಲುವು ಅಥವಾ ಡ್ರಾ ಸಾಧಿಸಿದರೆ ಮಾತ್ರ ಸರಣಿ ಆಸೆಯನ್ನು ಜೀವಂತವಿರಿಸಿಕೊಳ್ಳಬಹುದು.

ನಿರ್ಣಾಯಕ ಪಂದ್ಯ