ಮಾರಾಣಾಂತಿಕ ಕಾರು ಅಪಘಾತದಿಂದ ಚೇತರಿಸಿಕೊಂಡು ಮತ್ತೆ ಕ್ರಿಕೆಟ್ ಅಖಾಡಕ್ಕಿಳಿದಿರುವ ಟೀಂ ಇಂಡಿಯಾವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ತಮ್ಮ ಹಳೆಯ ಆಟವನ್ನೇ ಮುಂದುವರೆಸಿದ್ದಾರೆ.
Pic credit: Google
ರಿಷಬ್ ಪಂತ್ ಇತ್ತೀಚಿನ ದಿನಗಳಲ್ಲಿ ಉತ್ತಮ ಫಾರ್ಮ್‌ನಲ್ಲಿದ್ದು, ಬಾಂಗ್ಲಾದೇಶದ ನಂತರ, ಇದೀಗ ಅವರು ನ್ಯೂಜಿಲೆಂಡ್ ವಿರುದ್ಧವೂ ಬ್ಯಾಟ್‌ನೊಂದಿಗೆ ಉತ್ತಮ ಪ್ರದರ್ಶನ ನೀಡಿದ್ದಾರೆ.
Pic credit: Google
ಮುಂಬೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ರಿಷಬ್ ಪಂತ್ 59 ಎಸೆತಗಳಲ್ಲಿ 60 ರನ್ಗಳ ಇನ್ನಿಂಗ್ಸ್ ಆಡಿ ತಂಡವನ್ನು ಸಂಕಷ್ಟದಿಂದ ಹೊರ ತಂದರು.
Pic credit: Google
ಈ ವರ್ಷ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರಿಷಬ್ ಪಂತ್ ವಿಕೆಟ್ ಕೀಪಿಂಗ್ನಲ್ಲಿ ಮಾತ್ರ ಪದೇ ಪದೇ ಎಡವುತ್ತಿದ್ದಾರೆ.
Pic credit: Google
ಇದಕ್ಕೆ ಉದಾಹರಣೆಯಾಗಿ ಪಂತ್, ನ್ಯೂಜಿಲೆಂಡ್ ವಿರುದ್ಧದ ಎರಡನೇ ಇನ್ನಿಂಗ್ಸ್‌ನಲ್ಲಿ ಡೆವೊನ್ ಕಾನ್ವೆ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇದಲ್ಲದೇ ಇನ್ನೂ ಕೆಲವು ಔಟಾಗುವ ಅವಕಾಶಗಳು ಕೈತಪ್ಪಿದವು.
Pic credit: Google
2024 ರಲ್ಲಿ, ರಿಷಬ್ ಪಂತ್ ಅವರ ಕ್ಯಾಚ್ ರೇಟ್ ಕೇವಲ 50 ಪ್ರತಿಶತದಷ್ಟಿದೆ. ಅಂದರೆ ಅವರು ಉಳಿದ ಅರ್ಧದಷ್ಟು ಕ್ಯಾಚಿಂಗ್ ಅವಕಾಶಗಳನ್ನು ಕೈಬಿಟ್ಟಿದ್ದಾರೆ.
Pic credit: Google
2024 ರಲ್ಲಿ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ಪಂತ್ ಅವರ ಕ್ಯಾಚಿಂಗ್ ಸರಾಸರಿ 2022 ರಲ್ಲಿ 89.5 ರಷ್ಟಿದ್ದರೆ, 2020 ರಲ್ಲಿ 75%, 2019 ರಲ್ಲಿ 84.6% ಮತ್ತು 2018 ರಲ್ಲಿ 76.9% ಆಗಿತ್ತು.
Pic credit: Google
ರಿಷಬ್ ಪಂತ್ ಅವರ ಈ ಅಂಕಿಅಂಶಗಳನ್ನು ನೋಡಿದರೆ, ಅವರು ಈ ವರ್ಷ ಪದೇ ಪದೇ ಕ್ಯಾಚ್ ಹಿಡಿಯುವಲ್ಲಿ ವಿಫಲರಾಗುತ್ತಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಇದು ಭಾರತ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ.