ಭಾರತದ ವಿರುದ್ಧ ಏಳು ವಿಕೆಟ್‌ಗಳಿಂದ ಸೋತ ಪಾಕಿಸ್ತಾನಕ್ಕೆ ವಿಶ್ವಕಪ್ ಸೋಲಿನ ಸರಣಿಯನ್ನು ಮುರಿಯಲು ಸಾಧ್ಯವಾಗಲಿಲ್ಲ.

16 October 2023

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನದ ಇನ್ನಿಂಗ್ಸ್ 42.5 ಓವರ್‌ಗಳಲ್ಲಿ 191 ರನ್‌ ಗಳಿಸಿತು.

ಇದಕ್ಕೆ ಉತ್ತರವಾಗಿ ರೋಹಿತ್ ಶರ್ಮಾ 63 ಎಸೆತಗಳಲ್ಲಿ ಬಿರುಸಿನ 86 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಪಂದ್ಯದ ನಂತರ ಪಾಕಿಸ್ತಾನದ ನಾಯಕ ಬಾಬರ್ ಆಝಂ ಮೇಲೆ ಟೀಂ ಇಂಡಿಯಾದ ಮಾಜಿ ಆಟಗಾರ ಗೌತಮ್ ಗಂಭೀರ್ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

ಪಂದ್ಯದ ವೇಳೆ ಬಾಬರ್ ನರ್ವಸ್ ಆಗಿ ಕಂಡುಬಂದರು ಎಂದು ಗಂಭೀರ್ ಹೇಳಿದ್ದಾರೆ.

ಬಾಬರ್ ಆಝಂ ಅತ್ಯಂತ ಅಂಜುಬುರುಕನಾಗಿದ್ದ. ಪಾಲುದಾರಿಕೆಯಲ್ಲಿ ಇಬ್ಬರು ಬ್ಯಾಟರ್‌ಗಳು ಒಂದೇ ರೀತಿಯಲ್ಲಿ ಬ್ಯಾಟ್ ಮಾಡಲು ಸಾಧ್ಯವಿಲ್ಲ, ಅವರಲ್ಲಿ ಒಬ್ಬರು ಅವಕಾಶಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಈ ಹಿಂದೆ ಪಾಕಿಸ್ತಾನವು ಅತ್ಯಂತ ಬಲಿಷ್ಠ ಬ್ಯಾಟರ್‌ಗಳನ್ನು ಹೊಂದಿತ್ತು. ಆದರೀಗ ಅಗ್ರ ಕ್ರಮಾಂಕದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಲು ಸಮರ್ಥವಾಗಿರುವ ಒಬ್ಬ ಬ್ಯಾಟರ್ ಇಲ್ಲ.

ವಾಸ್ತವವಾಗಿ ವಿಶ್ವಕಪ್ 2023 ರ ಆರಂಭದ ಮೊದಲು, ಯಾರು ಹೆಚ್ಚು ರನ್ ಗಳಿಸುತ್ತಾರೆ ಎಂಬ ಚರ್ಚೆ ನಡೆಯುತ್ತಿರುವಾಗ ಗೌತಮ್ ಗಂಭೀರ್, ಬಾಬರ್ ಆಝಂ ಅವರ ಹೆಸರನ್ನು ಉಲ್ಲೇಖಿಸಿದ್ದರು.

ಆದರೆ, ಭಾರತದ ವಿರುದ್ಧದ ಪಂದ್ಯದ ನಂತರ ಗೌತಮ್ ಗಂಭೀರ್, ಬಾಬರ್ ಆಝಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.