ಮೆಕಲಮ್ ದಾಖಲೆ ಮುರಿಯುತ್ತಾರಾ ಜೈಸ್ವಾಲ್?

16 september 2024

Pic credit: Google

ಪೃಥ್ವಿ ಶಂಕರ

Pic credit: Google

ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಪ್ರಾರಂಭವಾಗಲಿದೆ, ಇದರ ಮೊದಲ ಪಂದ್ಯವು ಸೆಪ್ಟೆಂಬರ್ 19 ರಿಂದ ಚೆನ್ನೈನಲ್ಲಿ ನಡೆಯಲಿದೆ.

Pic credit: Google

ಈ ಸರಣಿಯಲ್ಲಿ ಟೀಂ ಇಂಡಿಯಾದ ಯುವ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್, ಇಂಗ್ಲೆಂಡ್ ತಂಡದ ಕೋಚ್ ಹಾಗೂ ಮಾಜಿ ನ್ಯೂಜಿಲೆಂಡ್ ಆಟಗಾರ ಬ್ರೆಂಡನ್ ಮೆಕಲಮ್ ದಾಖಲೆಯ ಮೇಲೆ ಕಣ್ಣೀಟ್ಟಿದ್ದಾರೆ.

Pic credit: Google

ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆ ಪ್ರಸ್ತುತ ಬ್ರೆಂಡನ್ ಮೆಕಲಮ್ ಅವರ ಹೆಸರಿನಲ್ಲಿದೆ.

Pic credit: Google

2014 ರಲ್ಲಿ  ಬ್ರೆಂಡನ್ ಮೆಕಲಮ್ 33 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಒಂದು ಕ್ಯಾಲೆಂಡರ್ ವರ್ಷದಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ದಾಖಲೆಯನ್ನು ಮಾಡಿದ್ದಾರೆ

Pic credit: Google

ಇದೀಗ ಭಾರತದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಈ ಸರಣಿಯಲ್ಲಿ ಈ ದಾಖಲೆಯನ್ನು ಮುರಿಯುವ ಅವಕಾಶ ಹೊಂದಿದ್ದು, ಜೈಸ್ವಾಲ್ ಇದುವರೆಗೆ ಒಂದು ಕ್ಯಾಲೆಂಡರ್ ವರ್ಷದಲ್ಲಿ 26 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

Pic credit: Google

ಒಂದು ವೇಳೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಯಶಸ್ವಿ ಜೈಸ್ವಾಲ್ 8 ಸಿಕ್ಸರ್‌ಗಳನ್ನು ಬಾರಿಸುವಲ್ಲಿ ಯಶಸ್ವಿಯಾದರೆ, ಈ ವಿಷಯದಲ್ಲಿ ಮೆಕಲಮ್ ದಾಖಲೆಯನ್ನು ಮುರಿಯಲಿದ್ದಾರೆ.

Pic credit: Google

ಪ್ರಸ್ತುತ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (26) ಎರಡನೇ ಸ್ಥಾನದಲ್ಲಿದ್ದರೆ, ಭಾರತದ ಮಾಜಿ ಆರಂಭಿಕ ವೀರೇಂದ್ರ ಸೆಹ್ವಾಗ್ ಮತ್ತು ಆಸ್ಟ್ರೇಲಿಯಾದ ದಂತಕಥೆ ಆಡಮ್ ಗಿಲ್‌ಕ್ರಿಸ್ಟ್ (ಇಬ್ಬರೂ 22) ಮೂರನೇ ಸ್ಥಾನದಲ್ಲಿದ್ದಾರೆ.