ಚಹಾಲ್- ಧನಶ್ರೀ ವಿಚ್ಛೇದನ ವದಂತಿ; ಶ್ರೇಯಸ್ ಅಯ್ಯರ್ ಪೋಸ್ಟ್ ವೈರಲ್! ಸತ್ಯಾಸತ್ಯತೆ ಏನು?
04 January 2025
Pic credit: Google
ಪೃಥ್ವಿ ಶಂಕರ
ಟೀಂ ಇಂಡಿಯಾದ ಸ್ಟಾರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸಂಚಲನ ಮೂಡಿಸಿದೆ.
Pic credit: Google
4 ವರ್ಷಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಈ ಜೋಡಿ ಪರಸ್ಪರ ವಿಚ್ಛೇದನ ಪಡೆಯುತ್ತಿದ್ದು, ಶೀಘ್ರದಲ್ಲೇ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವರದಿಯೊಂದು ಹೇಳಿದೆ.
Pic credit: Google
ಇದು ಮಾತ್ರವಲ್ಲದೆ, ಚಹಾಲ್ ಮತ್ತು ಧನಶ್ರೀ ಇಬ್ಬರೂ Instagram ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ್ದು, ಚಹಾಲ್ ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋಗಳನ್ನು ಸಹ ಡಿಲೀಟ್ ಮಾಡಿದ್ದಾರೆ.
Pic credit: Google
ಇದೆಲ್ಲದರ ನಡುವೆ ಟೀಂ ಇಂಡಿಯಾ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಹೆಸರಿನಲ್ಲಿರುವ ಪೋಸ್ಟ್ವೊಂದು ವೈರಲ್ ಆಗುತ್ತಿದೆ.
Pic credit: Google
ಆ ಪೋಸ್ಟ್ನಲ್ಲಿ ಏನಿದೆ ಎಂಬುದನ್ನು ನೋಡುವುದಾದರೆ ‘ಇಂದು ನಾನು ತುಂಬಾ ಸಂತೋಷವಾಗಿದ್ದೇನೆ' ಎಂದು ಬರೆಯಲಾಗಿದೆ.
Pic credit: Google
ಇದೀಗ ಶ್ರೇಯಸ್ ಅಯ್ಯರ್ ಅವರ ಹೆಸರಿನಲ್ಲಿರುವ 'X' ಖಾತೆಯ ಈ ಪೋಸ್ಟ್‌ನ ಸ್ಕ್ರೀನ್‌ಶಾಟ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Pic credit: Google
ಆದರೆ ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರೀಶಿಲಿಸಿದಾಗ ಇದು ಶ್ರೇಯಸ್ ಅಯ್ಯರ್ ಅವರ ಅಧಿಕೃತ ಖಾತೆಯಿಂದ ಬಂದಿದ್ದಲ್ಲ. ಬದಲಿಗೆ ಈ ಪೋಸ್ಟ್ ಅನ್ನು ಎಡಿಟ್ ಮಾಡಲಾಗಿದೆ.
Pic credit: Google
ವಾಸ್ತವವಾಗಿ, ಕಳೆದ ಒಂದೇರಡು ವರ್ಷಗಳಿಂದ ಧನಶ್ರೀ ಮತ್ತು ಶ್ರೇಯಸ್ ಅಯ್ಯರ್ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಇದರಿಂದಾಗಿ ವಿಚ್ಛೇದನದ ಸುದ್ದಿ ಬಂದ ತಕ್ಷಣ ನಕಲಿ ಸ್ಕ್ರೀನ್‌ಶಾಟ್‌ಗಳು ಹರಡುತ್ತಿವೆ.