ಚಹಾಲ್- ಧನಶ್ರೀ ವೈವಾಹಿಕ ಬದುಕಿನಲ್ಲಿ ಬಿರುಕು?

24 December 2024

Pic credit: Google

ಪೃಥ್ವಿ ಶಂಕರ

2024 ರಲ್ಲಿ ಭಾರತದ ಇಬ್ಬರು ಸ್ಟಾರ್ ಕ್ರೀಡಾಪಟುಗಳು ತಮ್ಮ ಮಡದಿಯರಿಗೆ ವಿಚ್ಛೇದನ ನೀಡಿದರು. ಇದೀಗ ಟೀಂ ಇಂಡಿಯಾದ ಮತ್ತೋರ್ವ ಕ್ರಿಕೆಟಿಗನ ವೈಯಕ್ತಿಕ ಬದುಕಿನಲ್ಲಿ ಬಿರುಗಾಳಿ ಎದ್ದಿದೆ.

Pic credit: Google

ಈ ವರ್ಷದ ಆರಂಭದಲ್ಲಿ ಮಾಜಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ವಿಚ್ಛೇದನ ಪಡೆಯುವ ಮೂಲಕ ಪರಸ್ಪರ ಬೇರೆ ಬೇರೆಯಾಗಿದ್ದರು.

Pic credit: Google

ಆ ನಂತರ2024 ರ ಜುಲೈ ತಿಂಗಳಲ್ಲಿ, ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಕ್‌ ವಿಚ್ಛೇದನ ಪಡೆದು ದೂರಾಗಿದ್ದರು.

Pic credit: Google

ಸಾನಿಯಾ ಮಿರ್ಜಾ ಮತ್ತು ಹಾರ್ದಿಕ್ ಪಾಂಡ್ಯ ನಂತರ, ಇದೀಗ ಭಾರತೀಯ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಅವರ ವೈಯಕ್ತಿಕ ಬದುಕಿನಲ್ಲಿ ಏನೂ ಸರಿ ಇಲ್ಲ ಎಂಬ ವದಂತಿ ಹಬ್ಬಿದೆ.

Pic credit: Google

ವಾಸ್ತವವಾಗಿ, ಯುಜ್ವೇಂದ್ರ ಚಹಾಲ್ 2020 ರಲ್ಲಿ ಧನಶ್ರೀ ವರ್ಮಾ ಅವರನ್ನು ವಿವಾಹವಾದರು. ಇದೀಗ 2024 ರಂದು, ಈ ದಂಪತಿಗಳು ಮದುವೆಯಾಗಿ 4 ವರ್ಷಗಳನ್ನು ಪೂರೈಸಿದ್ದಾರೆ.

Pic credit: Google

ಆದರೆ ಈ ಬಾರಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ಯುಜುವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಏನನ್ನೂ ಪೋಸ್ಟ್ ಮಾಡಿಲ್ಲ. ಅಂದಿನಿಂದ, ಈ ದಂಪತಿಗಳ ನಡುವೆ ಏನೋ ಸರಿಯಿಲ್ಲ ಎಂದು ಅಭಿಮಾನಿಗಳು ಮಾತನಾಡಲಾರಂಭಿಸಿದ್ದಾರೆ.

Pic credit: Google

ವಾಸ್ತವವಾಗಿ, ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾ ಪ್ರತಿ ವಿಶೇಷ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಶುಭ ಹಾರೈಸುತ್ತಾರೆ. ಆದರೆ ಈ ವರ್ಷ ಅದು ನಾಪತ್ತೆಯಾಗಿದೆ.

Pic credit: Google

ಇದಲ್ಲದೆ ಕೆಲ ಸಮಯದಿಂದ ಈ ಜೋಡಿ ಒಟ್ಟಿಗೆ ಒಂದೂ ಫೋಟೋ ಕೂಡ ಹಾಕಿಲ್ಲ, ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಹಾಗಾಗಿ ಇಬ್ಬರ ನಡುವೆ ಬಿರುಕು ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Pic credit: Google

Pic credit: Google

Pic credit: Google

Pic credit: Google

Pic credit: Google

Pic credit: Google