ಧನಶ್ರೀ ಅಥವಾ ಚಹಾಲ್ ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು?

06 January 2025

Pic credit: Google

ಪೃಥ್ವಿ ಶಂಕರ

ಯುಜ್ವೇಂದ್ರ ಚಹಾಲ್ ಹಾಗೂ ಅವರ ಪತ್ನಿ ಧನಶ್ರೀ ವರ್ಮಾ ಅವರೊಂದಿಗಿನ ಸಂಬಂಧದಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.

Pic credit: Google

ಇದಕ್ಕೆ ಪೂರಕವಾಗಿ ಇವರಿಬ್ಬರು ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪರಸ್ಪರ ಅನ್​ಫಾಲೋ ಮಾಡಿದ್ದು ಚಹಾಲ್, ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

Pic credit: Google

ಈ ನಡುವೆ ಈ ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಇಬ್ಬರ ಬಳಿ ಎಷ್ಟು ಹಣವಿದೆ ಎಂಬುದರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹುಡುಕಾಟ ಶುರುವಾಗಿದೆ. ಅದಕ್ಕೆಲ್ಲ ಉತ್ತರ ಇಲ್ಲಿದೆ.

Pic credit: Google

ಧನಶ್ರೀ ವರ್ಮಾ ಹುಟ್ಟಿದ್ದು ದುಬೈನಲ್ಲಿ. ಧನಶ್ರೀ ವರ್ಮಾ ಕೂಡ ವೃತ್ತಿಯಲ್ಲಿ ದಂತವೈದ್ಯೆ ಎಂಬುದು ಕೆಲವೇ ಜನರಿಗೆ ಗೊತ್ತು. ಆದರೂ ಅವರು ತಮ್ಮ ಡಾನ್ಸ್​ನಿಂದಾಗಿಯೇ ಎಲ್ಲರಿಗೂ ಹೆಚ್ಚು ಪರಿಚಿತರಾಗಿದ್ದಾರೆ.

Pic credit: Google

ಡಾನ್ಸ್ ಮೇಲಿನ ಪ್ರೀತಿಯಿಂದ ಪ್ರೇರಿತರಾದ ಧನಶ್ರೀ ಯೂಟ್ಯೂಬ್ ಚಾನೆಲ್ ಅನ್ನು ಪ್ರಾರಂಭಿಸಿ, ಅಲ್ಲಿ ಅವರು ತಮ್ಮ ನೃತ್ಯ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Pic credit: Google

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಧನಶ್ರೀಗೆ 6.2 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ.

Pic credit: Google

ಅವರು ತಮ್ಮ ಯೂಟ್ಯೂಬ್ ಚಾನಲ್, ಸೋಶಿಯಲ್ ಮೀಡಿಯಾ, ಬ್ರ್ಯಾಂಡ್ ಅನುಮೋದನೆಗಳು ಮತ್ತು ನೃತ್ಯ ಸಂಯೋಜನೆಯ ಮೂಲಕ ಸಾಕಷ್ಟು ಹಣ ಗಳಿಸುತ್ತಾರೆ.

Pic credit: Google

ವರದಿಯೊಂದರ ಪ್ರಕಾರ, ಧನಶ್ರೀ ಅವರ ನಿವ್ವಳ ಮೌಲ್ಯವು ಮೂರು ಮಿಲಿಯನ್ ಯುಎಸ್ ಡಾಲರ್‌ಗಳು ಅಂದರೆ ಸರಿಸುಮಾರು 26 ಕೋಟಿ ರೂ. ಎಂದು ಹೇಳಲಾಗುತ್ತದೆ.

Pic credit: Google

ಇತ್ತ ಚಹಾಲ್ ಭಾರತ ಕ್ರಿಕೆಟ್ ತಂಡದ ಬೌಲರ್ ಆಗಿದ್ದು, ಸದ್ಯ ತಂಡದಿಂದ ಹೊರಗಿದ್ದಾರೆ. ಇದರ ಹೊರತಾಗಿಯೂ ಚಹಾಲ್ ಅವರ ವಾರ್ಷಿಕ ವೇತನ ಸುಮಾರು 7-8 ಕೋಟಿ ರೂ ಎಂದು ಹೇಳಲಾಗುತ್ತದೆ.

Pic credit: Google

ಐಪಿಎಲ್‌ನಲ್ಲಿಯೂ ಚಹಾಲ್ ಅವರ ಗಳಿಕೆಯೂ ಅತ್ಯುತ್ತಮವಾಗಿದ್ದು, ಈ ವರ್ಷ ಅವರು ಪಂಜಾಬ್ ಕಿಂಗ್ಸ್ ಪರ ಆಡುವುದಕ್ಕೆ ಬರೋಬ್ಬರಿ 18 ಕೋಟಿ ರೂ. ವೇತನ ಪಡೆಯಲಿದ್ದಾರೆ.

Pic credit: Google

ಕ್ರಿಕೆಟ್‌ನ ಹೊರತಾಗಿ, ಚಹಾಲ್ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳು ಮತ್ತು ಅವರ ಇತರ ವ್ಯಾಪಾರ ಉದ್ಯಮಗಳಿಂದ ಕೂಡ ಹಣ ಗಳಿಸುತ್ತಾರೆ. ವರದಿಯ ಪ್ರಕಾರ ಅವರ ನಿವ್ವಳ ಮೌಲ್ಯ ಸುಮಾರು 70 ರಿಂದ 80 ಕೋಟಿ ಎಂದು ಹೇಳಲಾಗುತ್ತದೆ.

Pic credit: Google