ಇಂಗ್ಲೆಂಡ್​ನಲ್ಲಿ ಚಹಲ್ ಚಮತ್ಕಾರ

18 september 2024

Pic credit: Google

ಪೃಥ್ವಿ ಶಂಕರ

Pic credit: Google

ಅನುಭವಿ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಟೀಂ ಇಂಡಿಯಾದಲ್ಲಿ ಕಾಣಸಿಕೊಂಡು ಬಹಳ ದಿನಗಳೇ ಕಳೆದಿವೆ. ಇದೀಗ ಅವರು ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ.

Pic credit: Google

ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಭಾಗವಾಗಿದ್ದ ಚಹಲ್ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆಯಲಿಲ್ಲ. ಆ ನಂತರದ ಸರಣಿಗೂ ಆಯ್ಕೆಯಾಗಲಿಲ್ಲ.

Pic credit: Google

ಇದೀಗ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಸಲುವಾಗಿ ವಿದೇಶಿ ನೆಲದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿರುವ ಚಹಲ್, ವಿಕೆಟ್​ಗಳ ಭೇಟೆ ಆರಂಭಿಸಿದ್ದಾರೆ.

Pic credit: Google

ಚಹಲ್ ಕಳೆದ ಹಲವು ವಾರಗಳಿಂದ ಇಂಗ್ಲೆಂಡ್‌ನ ದೇಶೀಯ ಕ್ರಿಕೆಟ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ಪರ ಆಡುತ್ತಿದ್ದು, ತಂಡದ ಬೌಲಿಂಗ್ ಜೀವಾಳ ಎನಿಸಿಕೊಂಡಿದ್ದಾರೆ.

Pic credit: Google

ಡರ್ಬಿಶೈರ್ ವಿರುದ್ಧ ನಡೆದ ಪಂದ್ಯದಲ್ಲಿ ಬರೋಬ್ಬರಿ 9 ವಿಕೆಟ್ ಉರುಳಸಿದ್ದ ಚಹಲ್, ಈಗ ಲೀಸೆಸ್ಟರ್‌ಶೈರ್ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ

Pic credit: Google

ಈ ಮೂಲಕ, ಈ ಅನುಭವಿ ಲೆಗ್ ಸ್ಪಿನ್ನರ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಎರಡು ಪಂದ್ಯಗಳ ಸತತ 3 ಇನ್ನಿಂಗ್ಸ್‌ಗಳಲ್ಲಿ ಒಟ್ಟು 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

Pic credit: Google

ಈ ಪ್ರದರ್ಶನದ ಹೊರತಾಗಿಯೂ, ಚಹಲ್ ಟೀಂ ಇಂಡಿಯಾಗೆ ಮರಳುವುದು ಕಷ್ಟ. ಆದರೆ ಮುಂಬರುವ ಐಪಿಎಲ್​ನಲ್ಲಿ ಚಹಲ್ ಖರೀದಿ ಹಲವು ತಂಡಗಳು ಮುಗಿಬೀಳುವುದು ಖಚಿತ.