ಇವೇ ನೋಡಿ ಭಾರತದಲ್ಲಿರುವ ಅತಿ ಎತ್ತರದ ಪ್ರತಿಮೆಗಳು

13-11-2013

ವಿಶ್ವದ ಅತಿ ಎತ್ತರದ ಪ್ರತಿಮೆಯೆಂದರೆ ಏಕತೆಯ ಪ್ರತಿಮೆ. 182.5 ಮೀಟರ್ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆ ಇದು. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿದೆ.

ಸ್ಟ್ಯಾಚೂ ಆಫ್ ಯೂನಿಟಿ

ಬೀದರ್ ಜಿಲ್ಲೆಯಲ್ಲಿರುವ ಬಸವಕಲ್ಯಾಣದಲ್ಲಿ ವಚನಕಾರ ಬಸವೇಶ್ವರರ ಪ್ರತಿಮೆಯಿದೆ. ಇದರ ಎತ್ತರ 108 ಅಡಿಗಳು.

ಬಸವಣ್ಣ

ಆಂಧ್ರಪ್ರದೇಶದ ವಿಜಯವಾಡಾ ನಗರದಿಂದ ಸುಮಾರು 30 ಕಿ.ಮೀ ದೂರವಿರುವ ಪರಿತಲಾ ಗ್ರಾಮದಲ್ಲಿ ಅಂಜನೇಯಸ್ವಾಮಿಯ ಪ್ರತಿಮೆ ಇದೆ. ಇದರ ಎತ್ತರ 135 ಅಡಿಗಳು.

ವೀರ ಅಭಯ ಆಂಜನೇಯಸ್ವಾಮಿ

ತಮಿಳುನಾಡಿನ ಕನ್ಯಾಕುಮಾರಿ ಬಳಿ ತಮಿಳಿನ ಪ್ರಾಚೀನ ಹಾಗೂ ಸಂತ ಕವಿ ತಿರುವಳ್ಳುವರ್ ಪ್ರತಿಮೆಯಿದೆ. ಇದು 133 ಅಡಿ ಇದೆ.

ತಿರುವಳ್ಳುವರ್ 

ಸಿಕ್ಕಿಂನ ರಾವಂಗ್ಲಾ ಬಳಿಯಲ್ಲಿ ಬುದ್ಧನ ಉದ್ಯಾನದಲ್ಲಿ ಸುಂದರವಾಗಿ ನಿರ್ಮಿಸಲಾದ ಎತ್ತರದ ಬೌದ್ಧ ವಿಗ್ರಹವಿದೆ. ಇದರ ಎತ್ತರ 128 ಅಡಿಗಳು.

ಬುದ್ಧ ಉದ್ಯಾನ 

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಅಮರಾವತಿ ಹಳ್ಳಿಯಲ್ಲಿ ಧಾನ್ಯ ಭಂಗಿಯಲ್ಲಿರುವ ಬುದ್ಧನ ವಿಗ್ರಹವಿದೆ. ಇದರ ಎತ್ತರ 125 ಅಡಿಗಳು.

ಧ್ಯಾನ ಬುದ್ಧ 

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ರೇವಲ್ಸರ್ ಪಟ್ಟಣದಲ್ಲಿ ಬೌದ್ಧರು ಎರಡನೇಯ ಬುದ್ಧನೆಂದು ಕರೆಯುವ ಗುರು ರಿಂಪೊಂಚೆ ಎಂತಲೂ ಕರೆಯಲ್ಪಡುವ ಪದ್ಮಸಂಭವರ ಪ್ರತಿಮೆಇದೆ. ಇದರ ಎತ್ತರ 123 ಅಡಿಗಳು.

ಪದ್ಮಸಂಭವ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿರುವ ಶಿವನ ಪ್ರತಿಮೆಯು 121 ಅಡಿ ಇದೆ. ಇದು ಅರಬ್ಬಿ ಸಮುದ್ರದ ಹಿನ್ನಿಲೆಯಲ್ಲಿ ಅದ್ಭುತವಾಗಿ ಕಾಣಿಸುತ್ತದೆ.

ಮುರುಡೇಶ್ವರ

ಛತ್​ ಪೂಜೆ: ನೀವು ತಿಳುದುಕೊಳ್ಳಬೇಕಾದ ವಿಶೇಷ ಹಬ್ಬ