ಅಪರೂಪಕ್ಕೆ ಸೀರೆಯುಟ್ಟ ನಟಿ ತಮನ್ನಾ ಭಾಟಿಯಾ, ಬೆಲೆ ಎಷ್ಟು ಗೊತ್ತೆ?
11 AUG 2024
Manjunatha
ಬಹುಭಾಷಾ ನಟಿ ತಮನ್ನಾ ಭಾಟಿಯಾ, ಗ್ಲಾಮರಸ್ ನಟಿಯಾಗಿರುವ ಜೊತೆಗೆ ಸಾಂಪ್ರದಾಯಿಕ ಉಡುಗೆಯಲ್ಲಿಯೂ ಕಾಣಿಸಿಕೊಳ್ಳುತ್ತಾರೆ.
ತಮನ್ನಾ ಭಾಟಿಯಾ ಸ್ಟೈಲ್
ಗ್ಲಾಮರಸ್ ಉಡುಗೆಗಳೆಂದರೆ ನಟಿ ತಮನ್ನಾ ಭಾಟಿಯಾಗೆ ಬಹಳ ಇಷ್ಟ, ಆದರೆ ಆಗಾಗ್ಗೆ ಸೀರೆ ತೊಟ್ಟು ಕಂಗೊಳಿಸುತ್ತಾರೆ.
ಗ್ಲಾಮರಸ್ ನಟಿ ತಮನ್ನಾ
ಅಪಾರ ದೈವಭಕ್ತಿ ಹೊಂದಿರುವ ತಮನ್ನಾ ಭಾಟಿಯಾ, ಸಂದರ್ಶನವೊಂದರಲ್ಲಿ ತಮಗೆ ಸೀರೆಯೆಂದರೆ ಬಹಳ ಇಷ್ಟವೆಂದು ಹೇಳಿಕೊಂಡಿದ್ದರು.
ಸೀರೆಯೆಂದರೆ ಬಹಳ ಇಷ್ಟ
ತಮನ್ನಾ ನಟಿಸಿರುವ ‘ಜರೂರತ್ ಸೆ ಜ್ಯಾದ’ ಸಿನಿಮಾದ ಕಾರ್ಯಕ್ರಮಕ್ಕೆ ತಿಳಿ ಬಿಳಿ ಬಣ್ಣದ ಸೀರೆಯುಟ್ಟುಕೊಂಡು ಬಂದಿದ್ದರು ತಮನ್ನಾ.
‘ಜರೂರತ್ ಸೆ ಜ್ಯಾದ’
ತಮನ್ನಾ ಉಟ್ಟಿದ್ದ ಸೀರೆಯ ಬೆಲೆ 1.24 ಲಕ್ಷ ರೂಪಾಯಿಗಳು. ಸೀರೆಯ ಮೇಲೆ ಕೆಲವು ಕುಸುರಿ ಕೆಲಸಗಳು ಸಹ ಇದ್ದವು.
ಸೀರೆಯ ಬೆಲೆ ಎಷ್ಟು?
ತಮನ್ನಾ ಭಾರತದ ಟಾಪ್ ರೂಪದರ್ಶಿಗಳಲ್ಲಿ ಒಬ್ಬರು. ಹಲವು ಬ್ರ್ಯಾಂಡ್ಗಳಿಗೆ ರಾಯಭಾರಿ ಆಗಿರುವ ತಮನ್ನಾ, ಫ್ಯಾಷನ್ನಲ್ಲಿ ಪ್ರಯೋಗ ಮಾಡುತ್ತಿರುತ್ತಾರೆ.
ಬ್ರ್ಯಾಂಡ್ಗಳಿಗೆ ರಾಯಭಾರಿ
ತಮನ್ನಾ ಭಾಟಿಯಾ ಪ್ರಸ್ತುತ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆ ಪ್ರೀತಿಯಲ್ಲಿದ್ದಾರೆ. ಈ ಜೋಡಿ ಕೈ-ಕೈ ಹಿಡಿದು ದೇಶ-ವಿದೇಶ ಸುತ್ತಾಡುತ್ತಿದೆ.
ಬಾಲಿವುಡ್ ನಟ ವಿಜಯ್
ತಾಯಿ ಆಗಲಿರುವ ದೀಪಿಕಾ ಧರಿಸಿರುವ ಈ ಸುಂದರ ಉಡುಗೆಯ ಬೆಲೆ ಎಷ್ಟು ಲಕ್ಷ?
ಇದನ್ನೂ ನೋಡಿ