ಐಫೋನ್ ಬಳಕೆದಾರರೇ ಎಚ್ಚರ: ಭಯ ಹುಟ್ಟಿಸಿದೆ ಹೊಸ ಮಾಲ್ವೇರ್

18 February 2024

Author: Vinay Bhat

ನೀವು ಐಫೋನ್ ಬಳಸುತ್ತಿದ್ದರೆ ತಕ್ಷಣ ಎಚ್ಚರದಿಂದಿರಿ, ಮಾರುಕಟ್ಟೆಯಲ್ಲಿ ಹೊಸ ಮಾಲ್‌ವೇರ್ ಬಂದಿದ್ದು ಅದು ನಿಮ್ಮ ಐಫೋನ್‌ಗೆ ಆಕ್ರಮಿಸಬಹುದು.

ಹೊಸ ಮಾಲ್ವೇರ್

ಇದರ ಹೆಸರು GoldPickaxe, ಇದು ಬ್ಯಾಂಕಿಂಗ್ ಟ್ರೋಜನ್ ಆಗಿದ್ದು, ಐಫೋನ್‌ನಲ್ಲಿರುವ ನಿಮ್ಮ ಬ್ಯಾಂಕ್ ವಿವರಗಳನ್ನು ಕದಿಯುವ ಸಾಧ್ಯತೆ ಇದೆಯಂತೆ.

ಬ್ಯಾಂಕ್ ಖಾತೆ

ಈ ಮಾಲ್ವೇರ್ ಅನೇಕ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದ್ದು ಅದು ಅಪಾಯವನ್ನು ಉಂಟುಮಾಡಬಹುದು ಮತ್ತು ಬ್ಯಾಂಕ್ ಖಾತೆಯ ಮಾಹಿತಿಯನ್ನು ಕದಿಯಬಹುದು.

ಹೊಸ ವೈಶಿಷ್ಟ್ಯ

ಟೆಕ್‌ರಾಡಾರ್‌ನ ವರದಿಯ ಪ್ರಕಾರ, GoldPickaxe ಐಒಎಸ್ ಸಾಧನಗಳಿಗೆ, ವಿಶೇಷವಾಗಿ ಐಫೋನ್‌ಗಳಿಗೆ ಪ್ರವೇಶಿಸುವ ಶಕ್ತಿಯನ್ನು ಹೊಂದಿದೆ.

ಐಫೋನ್ ಟಾರ್ಗೆಟ್

ಈ ಅಪಾಯಕಾರಿ ಟ್ರೋಜನ್ ಐಫೋನ್‌ನ ಭದ್ರತೆಯನ್ನು ತೆಗದುಹಾಕುತ್ತದೆ ಮತ್ತು ಫೇಸ್ ಅನ್ಲಾಕ್, ಐಡಿ, ಮೆಸೇಜ್ ಇತ್ಯಾದಿ ಡೇಟಾವನ್ನು ಕದಿಯಬಹುದು.

ಡೇಟಾ ಕಳ್ಳತನ

ಸೈಬರ್ ಹ್ಯಾಕರ್‌ಗಳು ಬ್ಯಾಂಕ್ ವಂಚನೆ ಮಾಡಲು ಇದನ್ನು ಬಳಸುತ್ತಾರೆ, ಪ್ರಸ್ತುತ ವಿಯೆಟ್ನಾಂ ಮತ್ತು ಥೈಲ್ಯಾಂಡ್ ಜನರು ಇದಕ್ಕೆ ಬಲಿಯಾಗಿದ್ದಾರೆ.

ಬ್ಯಾಂಕ್ ವಂಚನೆ

ಈ ಅಪಾಯಕಾರಿ ಟ್ರೋಜನ್ ಬಗ್ಗೆ ಎಚ್ಚರದಿಂದ ಇರಿ ಎಂದು ಟೆಕ್ ದೈತ್ಯರು ಹೇಳಿದ್ದಾರೆ. ಥರ್ಡ್ ಪಾರ್ಟಿ ಆ್ಯಪ್ ಇನ್​ಸ್ಟಾಲ್ ಮಾಡುವ ಎಚ್ಚರದಿಂದಿರಿ.

ಸುರಕ್ಷಿತವಾಗಿರಿ