27-11-2023

ಕೇವಲ 14,499 ರೂ. ಗೆ ಸಿಗುತ್ತೆ ಈ ಜಿಯೋ ಲ್ಯಾಪ್‌ಟಾಪ್

ಅಗ್ಗದ ಲ್ಯಾಪ್‌ಟಾಪ್

ಕಡಿಮೆ ಬೆಲೆಗೆ ಒಂದೊಳ್ಳೆ ಲ್ಯಾಪ್‌ಟಾಪ್ ಬೇಕು ಎಂಬವರಿಗೆ ರಿಲಯನ್ಸ್ ಜಿಯೋ ಜಿಯೋಬುಕ್ ಲ್ಯಾಪ್‌ಟಾಪ್ ಅನ್ನು ಬಜೆಟ್ ಬೆಲೆಗೆ ಮಾರಾಟ ಮಾಡುತ್ತಿದೆ. ಅದುಕೂಡ ಕೇವಲ 15,000 ರೂ. ಒಳಗೆ.

ಪೈಪೋಟಿ

ರಿಲಯನ್ಸ್ ಜಿಯೋದ ಈ ಅಗ್ಗದ ಲ್ಯಾಪ್‌ಟಾಪ್ ಲೆನೊವೊ, ಹೆಚ್'ಪಿ ಮತ್ತು ಏಸರ್ ಕಂಪನಿಗಳ ಕೈಗೆಟುಕುವ ಲ್ಯಾಪ್‌ಟಾಪ್‌ಗಳೊಂದಿಗೆ ಸ್ಪರ್ಧಿಸುತ್ತದೆ.

ವೈಶಿಷ್ಟ್ಯಗಳು

ಜಿಯೋದ ಈ ಲ್ಯಾಪ್‌ಟಾಪ್ 11.6 ಇಂಚಿನ ಎಲ್‌ಇಡಿ ಬ್ಯಾಕ್‌ಲಿಟ್‌ನೊಂದಿಗೆ ಬರುತ್ತಿದೆ, ಇದು ಸಾಕಷ್ಟು ಹಗುರವಾಗಿದ್ದು, ತೂಕ ಕೇವಲ 990 ಗ್ರಾಂ.

ರಾಮ್-ಶೇಖರಣೆ

JioBook 4GB LPDDR4 RAM ಜೊತೆಗೆ 64 GB ಫ್ಲಾಶ್ ಮೆಮೊರಿಯನ್ನು ಹೊಂದಿದೆ, SD ಕಾರ್ಡ್ ಸಹಾಯದಿಂದ 256GB ವರೆಗೆ ಸಂಗ್ರಹಣೆ ವಿಸ್ತರಿಸಬಹುದು.

ಸಂಪರ್ಕ ಆಯ್ಕೆ

JioOS ಮೂಲಕ ಕಾರ್ಯನಿರ್ವಹಿಸುವ ಈ ಲ್ಯಾಪ್‌ಟಾಪ್ ಬ್ಲೂಟೂತ್ ಆವೃತ್ತಿ 5, ಡ್ಯುಯಲ್ ಬ್ಯಾಂಡ್ ವೈ-ಫೈ ಮತ್ತು 4G LTE ಬೆಂಬಲವನ್ನು ಹೊಂದಿದೆ.

ಬ್ಯಾಟರಿ ಬ್ಯಾಕಪ್

ಕಡಿಮೆ ಬೆಲೆಯಾಗಿದ್ದರೂ ಈ ಲ್ಯಾಪ್‌ಟಾಪ್ 4000 mAh ಬ್ಯಾಟರಿಯನ್ನು ಹೊಂದಿದ್ದು, ಇದು 8 ಗಂಟೆಗಳ ಬ್ಯಾಟರಿ ಬ್ಯಾಕಪ್ ಅನ್ನು ನೀಡುತ್ತದೆ.

ಪ್ರೊಸೆಸರ್

ಈ ಅಗ್ಗದ ಲ್ಯಾಪ್‌ಟಾಪ್‌ನಲ್ಲಿ ಮೀಡಿಯಾ ಟೆಕ್ MT8788 ಆಕ್ಟಾ-ಕೋರ್ ಪ್ರೊಸೆಸರ್ ಅನ್ನು ರಿಲಯನ್ಸ್ ಜಿಯೋ ಒದಗಿಸಿದೆ.

ಜಿಯೋಬುಕ್ ಬೆಲೆ

Jio.com ಪ್ರಕಾರ, JioBook ಲ್ಯಾಪ್‌ಟಾಪ್‌ನ ಬೆಲೆ ರೂ. 14,499 ಆಗಿದೆ, ಈ ಸಾಧನವನ್ನು ರಿಲಯನ್ಸ್ ಡಿಜಿಟಲ್ ಮತ್ತು ಅಮೆಜಾನ್ ಮೂಲಕ ಖರೀದಿಸಬಹುದು.