30-03-2024

20,000 ರೂ. ಒಳಗಿನ 2024ರ 5 ಅತ್ಯುತ್ತಮ ಕ್ಯಾಮೆರಾ ಫೋನ್‌ಗಳು

Author: Vinay Bhat

ಕ್ಯಾಮೆರಾ ಫೋನ್‌

ಇಂದು ಮಾರುಕಟ್ಟೆಯಲ್ಲಿ ಕ್ಯಾಮೆರಾ ಫೋನುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಅದಕ್ಕಾಗಿಯೆ ಕಂಪನಿಗಳು ಬಜೆಟ್ ಬೆಲೆಗೆ ಕ್ಯಾಮೆರಾ ಫೋನ್'ಗಳನ್ನು ರಿಲೀಸ್ ಮಾಡುತ್ತವೆ.

ಫೋಟೋಗ್ರಫಿ

ನೀವು ಫೋಟೀಗ್ರಫಿ ಪ್ರಿಯರಾಗಿದ್ದಲ್ಲಿ 2024 ರಲ್ಲಿ 20,000 ರೂ. ಅಡಿಯಲ್ಲಿ ಖರೀದಿಸ ಬಹುದಾದ ಉನ್ನತ ಕ್ಯಾಮೆರಾ ಫೋನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

ಪೋಕೋ X6 5G

ಪೋಕೋ X6 5G ಬೆಲೆ ರೂ. 19,999. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 64MP OIS ಪ್ರಾಥಮಿಕ ಶೂಟರ್, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್‌ ಇದೆ.

CE 3 Lite 5G

ಒನ್​ಪ್ಲಸ್ ನಾರ್ಟ್ CE 3 Lite 5G ಬೆಲೆ ರೂ. 17,999 ಇದು EIS ಮತ್ತು 3x ಜೂಮ್‌ನೊಂದಿಗೆ 108MP ಪ್ರಾಥಮಿಕ ಕ್ಯಾಮೆರಾದೊಂದಿಗೆ ಬರುತ್ತದೆ.

ರಿಯಲ್ ಮಿ 12+ 5G

ಈ ಫೋನ್ ಬೆಲೆ 19,999 ರೂ. ಇದರಲ್ಲಿ 50MP ಸೋನಿ LYT-600 OIS ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ನೀಡಲಾಗಿದೆ.

ಐಕ್ಯೂ Z9 5G

ಇದರ ಬೆಲೆ 19,999 ರೂ. ಈ ಫೋನ್ 50MP Sony IMX882 OIS ಪ್ರಾಥಮಿಕ ಸಂವೇದಕ ಮತ್ತು 2MP ಡೆಪ್ತ್ ಲೆನ್ಸ್‌ನೊಂದಿಗೆ ಬರುತ್ತದೆ.ಕಡಿಮೆ-ಬೆಳಕಿನ ಚಿತ್ರಗಳನ್ನು ಉತ್ತಮವಾಗಿ ಸೆರೆಹಿಡಿಯುತ್ತದೆ.

ರೆಡ್ಮಿ ನೋಟ್ 13 5G

ಇದರ ಬೆಲೆ 17,999 ರೂ. ಈ ಫೋನ್ 108MP ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್‌ನೊಂದಿಗೆ ಬರುತ್ತದೆ.