09-03-2024

ಇಲ್ಲಿದೆ ನೋಡಿ 10,000 ರೂ. ಒಳಗಿನ ಬೆಸ್ಟ್ 5G ಸ್ಮಾರ್ಟ್​ಫೋನ್ಸ್

Author: Vinay Bhat

ಬಜೆಟ್ ಫೋನ್ಸ್

10,000 ರೂಪಾಯಿ ಒಳಗೆ ನೀವು ಹೊಸ 5G ಸ್ಮಾರ್ಟ್‌ಫೋನ್ ಹುಡುಕುತ್ತಿದ್ದೀರಾ?. ಹಾಗಾದರೆ ಇಲ್ಲಿದೆ ನೋಡಿ 3 ಬೆಸ್ಟ್ ಫೋನ್.

ರೆಡ್ಮಿ 13c

ಮೊನ್ನೆಯಷ್ಟೆ ಬಿಡುಗಡೆಯಾದ ಈ ರೆಡ್ಮಿ ಫೋನ್ 9,999 ರೂ. ಗಳ ವಿಶೇಷ ಬೆಲೆಯೊಂದಿಗೆ ಲಭ್ಯವಿದೆ. ಈ ಸಾಧನದ ಮಾರಾಟವು ಡಿಸೆಂಬರ್ 16 ರಿಂದ ಪ್ರಾರಂಭವಾಗುತ್ತದೆ.

ರೆಡ್ಮಿ 13c ಫೀಚರ್ಸ್

ಈ ಬಜೆಟ್ ಫೋನ್ ಡ್ಯುಯಲ್ 5G ಬೆಂಬಲ, ಡೈಮೆನ್ಶನ್ 6100 ಪ್ಲಸ್ ಪ್ರೊಸೆಸರ್, 16 GB RAM ಮತ್ತು 50 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಲಾವಾ ಬ್ಲೇಜ 5G

ಈ ಲಾವಾ ಮೊಬೈಲ್ ಫೋನ್‌ನ 4GB/128GB ಸ್ಟೋರೇಜ್ ರೂಪಾಂತರದ ಬೆಲೆ 9,299 ರೂ. ಆಗಿದೆ. 3GB ವರ್ಚುವಲ್ RAM ಸಹಾಯದಿಂದ 7GB ವರೆಗೆ RAM ಹೆಚ್ಚಿಸಬಹುದು.

ಲಾವಾ ಬ್ಲೇಜ್ ಫೀಚರ್ಸ್

ಈ ಫೋನ್ 50MP ಟ್ರಿಪಲ್ ರಿಯರ್ ಕ್ಯಾಮೆರಾ, ಡೈಮೆನ್ಶನ್ 700 ಪ್ರೊಸೆಸರ್, 7GB RAM ಮತ್ತು 5000mAh ಬ್ಯಾಟರಿಯನ್ನು ಹೊಂದಿದೆ.

ಐಟೆಲ್ P55 5G

ಈ ಕೈಗೆಟುಕುವ 5G ಫೋನ್‌ನ 6GB/128GB ರೂಪಾಂತರವು ಅಮೆಜಾನ್'ನಲ್ಲಿ ರೂ. 10499ಕ್ಕೆ ಲಭ್ಯವಿದೆ. ಕೂಪನ್ ಸಹಾಯದಿಂದ 9,999 ರೂ ಗೆ ಖರೀದಿಸಬಹುದು.

ಐಟೆಲ್ P55 5G ಫೀಚರ್ಸ್

ಈ ಫೋನ್ ಮೀಡಿಯಾ ಟೆಕ್ ಡೈಮೆನ್ಶನ್ 6080 ಪ್ರೊಸೆಸರ್, 50MP AI ಡ್ಯುಯಲ್ ಕ್ಯಾಮೆರಾ, 18W ಫಾಸ್ಟ್ ಚಾರ್ಜ್ ಸಪೋರ್ಟ್ ನೊಂದಿಗೆ ಬರುತ್ತದೆ.