ನೀವು ಹೀಗೆ ಇಂಟರ್ನೆಟ್ ಬಳಸಿದರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ

24-March 2024

Author: Vinay Bhat

ನಾವೆಲ್ಲರೂ ಪ್ರತಿ ದಿನ ಇಂಟರ್ನೆಟ್ ಬಳಸುತ್ತೇವೆ. ಇದಕ್ಕಾಗಿ ಯಾವುದಾದರು ಒಂದು ಬ್ರೌಸರ್ ಬೇಕೇ ಬೇಕು. ಇಂದು ಬ್ರೌಸಿಂಗ್'ಗೆಂದು ಅನೇಕ ಬ್ರೌಸರ್'ಗಳಿವೆ.

ಇಂಟರ್ನೆಟ್

ಗೂಗಲ್ ಕ್ರೋಮ್, ಮೊಜ್ಹಿಲ್ಲಾ ಫೈರ್‌ಫಾಕ್ಸ್, ಮೈಕ್ರೋಸಾಫ್ಟ್ ಎಡ್ಜ್ ಸೇರಿದಂತೆ ಅನೇಕ ವಿಶ್ವದ ಪ್ರಸಿದ್ಧ ಇಂಟರ್ನೆಟ್ ಬ್ರೌಸರ್‌ಗಳನ್ನು ನಾವು ಉಪಯೋಗಿಸುತ್ತೇವೆ.

ಇಂಟರ್ನೆಟ್ ಬ್ರೌಸರ್

ನೀವು Mozilla Firefox ವೆಬ್ ಬ್ರೌಂಸರ್ ಅನ್ನು ಬಳಸುತ್ತಿದ್ದರೆ ಜಾಗರೂಕರಾಗಿರಿ. ಏಕೆಂದರೆ ಕೇಂದ್ರ ಸರ್ಕಾರವು Firefox ಬಗ್ಗೆ ಎಚ್ಚರಿಕೆಯನ್ನು ನೀಡಿದೆ.

ಮೊಜ್ಹಿಲ್ಲಾ ಫೈರ್ ಫಾಕ್ಸ್

ಭಾರತ ಸರ್ಕಾರದ ಸೈಬರ್ ಸೆಕ್ಯುರಿಟಿ ಏಜೆನ್ಸಿಯಾದ CERT-IN ಫೈರ್‌ಫಾಕ್ಸ್‌ ಬಗ್ಗೆ ಎಚ್ಚರಿಕೆಯನ್ನು ನೀಡಿದ್ದು, ಇದನ್ನು ಬಳಸುವುದರಿಂದ ಹೆಚ್ಚಿನ ಅಪಾಯವಿದೆ ಎಂದು ಹೇಳಿದೆ.

ಸೈಬರ್ ಎಚ್ಚರಿಕೆ

ಫೈರ್‌ಫಾಕ್ಸ್‌ನಲ್ಲಿ ಹಲವಾರು ನ್ಯೂನತೆಗಳಿವೆ, ಇದು ಹ್ಯಾಕರ್‌ಗಳು ನಿಮ್ಮ ಸಾಧನದ ನಿಯಂತ್ರಣವನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಬಹುದು.

ಮಾಹಿತಿ ಲೀಕ್

ಸೈಬರ್ ದಾಳಿಕೋರರು ನಿಮ್ಮ ವೈಯಕ್ತಿಕ ವಿವರಗಳನ್ನು ಕದಿಯಬಹುದು, ಇದು ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು, ಬ್ಯಾಂಕ್ ವಂಚನೆಗೆ ಕಾರಣವಾಗಬಹುದು.

ಬ್ಯಾಂಕ್ ವಂಚನೆ

ಸೈಬರ್ ದಾಳಿಯನ್ನು ತಪ್ಪಿಸಲು, ಫೈರ್‌ಫಾಕ್ಸ್ ಬ್ರೌಸರ್ ಅನ್ನು ಕೂಡಲೇ ನವೀಕರಿಸಿ ಮತ್ತು ಪ್ರತಿಷ್ಠಿತ ಆಂಟಿ-ವೈರಸ್ ಅಥವಾ ಆಂಟಿ-ಮಾಲ್‌ವೇರ್ ಸಾಫ್ಟ್‌ವೇರ್ ಅನ್ನು ಇನ್​ಸ್ಟಾಲ್ ಮಾಡಿ.

ಅಪ್ಡೇಟ್ ಮಾಡಿ