02-10-2023

ರಾತ್ರಿಯಿಡೀ ಫೋನ್ ಚಾರ್ಜ್​ಗೆ ಹಾಕಿ ಮಲಗುತ್ತೀರಾ?

ಎಚ್ಚರ

ಮಲಗುವ ಮುನ್ನ ಸ್ಮಾರ್ಟ್​ಫೋನ್ ಅನ್ನು ಚಾರ್ಜ್'ಗೆ ಹಾಕಿಡುವ ಅಭ್ಯಾಸ ನಿಮಗೆ ಇದೆಯೇ?. ಹಾಗಿದ್ರೆ ಎಚ್ಚರ, ಎಂದಿಗೂ ಹೀಗೆ ಮಾಡಬೇಡಿ.

ಸ್ಫೋಟಕಗೊಳ್ಳುತ್ತದೆ

ರಾತ್ರಿಯಿಡೀ ಫೋನ್ ಚಾರ್ಜ್ ಮಾಡುವುದರಿಂದ ಹೀಟ್ ಆಗುತ್ತದೆ. ಬ್ಯಾಟರಿ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿ ಫೋನ್ ಸ್ಫೋಟಕ್ಕೂ ಕಾರಣವಾಗಬಹುದು.

ಸ್ಯಾಮ್‌ಸಂಗ್‌ ಏನು ಹೇಳಿದೆ?

ದೀರ್ಘ ಸಮಯ ಫೋನ್ ಚಾರ್ಜ್ ಮಾಡಿದ್ರೆ ಅದರ ಸಾಮರ್ಥ್ಯವು 30% ರಿಂದ 70% ವರೆಗೆ ಇಳಿಕೆಯಾಗುತ್ತದೆ. ಇದರಿಂದ ಬ್ಯಾಟರಿ ಬೇಗ ಹಾಳಾಗುತ್ತದೆ ಎಂದು ಸ್ಯಾಮ್‌ಸಂಗ್ ಹೇಳಿದೆ.

ಆ್ಯಪಲ್ ಏನು ಹೇಳಿದೆ?

ಆ್ಯಪಲ್ ಫೋನ್ ತಯಾರಾಕರ ಪ್ರಕಾರ, ಐಫೋನ್ ರಾತ್ರಿ ಪೂರ್ತಿ ಚಾರ್ಜಿಂಗ್ ಹಾಕುವುದರಿಂದ ಫೋನಿನ ಬ್ಯಾಟರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಶೇ. 100 ಚಾರ್ಜ್ ಬೇಡ

ಫೋನ್ ತಯಾರಾಕರ ಪ್ರಕಾರ ಮೊಬೈಲ್ ಅನ್ನು ಶೇ. 100 ರಷ್ಟು ಚಾರ್ಜ್ ಮಾಡಬಾರದು. ಐಫೋನ್ ಆದರೆ ಶೇ. 80 ರಷ್ಟು ಮಾಡಿದರೆ ಒಳ್ಳೆಯದು.

ಹೀಗೆ ಮಾಡಬೇಡಿ

ಫೋನ್ ಚಾರ್ಜ್​ಗೆ ಹಾಕಿರುವಾಗ ಎಂದಿಗೂ ವಿಡಿಯೋ ನೋಡುವುದು, ಕಾಲ್​ನಲ್ಲಿ ಮಾತನಾಡುವುದು, ಗೇಮ್ ಮಾಡುವುದು ಮಾಡಬೇಡಿ.

ಸ್ವಿಚ್ ಆಫ್ ಮಾಡಿ

ಎರಡು ದಿನಕ್ಕೆ ಒಮ್ಮೆಯಾದರು ನಿಮ್ಮ ಸ್ಮಾರ್ಟ್​ಫೋನನ್ನು ಐದರಿಂದ ಹತ್ತು ನಿಮಿಷಗಳ ಕಾಲ ಸ್ವಿಚ್ ಮಾಡಿ. ಇದು ಮೊಬೈಲ್ ಹೀಟ್ ಆಗುವುದನ್ನು ತಪ್ಪಿಸುತ್ತದೆ.

ಕೇವಲ 39,999 ರೂ. ಕೊಟ್ಟು ಐಫೋನ್ 13 ಖರೀದಿಸಿ