Flipkart Valentine's Day Sale: ಬಂಪರ್ ರಿಯಾಯಿತಿಯ ಫೋನುಗಳ ಪಟ್ಟಿ ಇಲ್ಲಿದೆ

13 February 2024

Author: Vinay Bhat

ಪ್ರೇಮಿಗಳ ದಿನದ ಪ್ರಯುಕ್ತ ಫ್ಲಿಪ್‌ಕಾರ್ಟ್ ವ್ಯಾಲೆಂಟೈನ್ಸ್ ಡೇ ಸೇಲ್ ಹಮ್ಮಿಕೊಂಡಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಇದೆ. ಇಲ್ಲಿದೆ ನೋಡಿ ಪಟ್ಟಿ.

ವ್ಯಾಲೆಂಟೈನ್ಸ್ ಡೇ ಗಿಫ್ಟ್

ಫ್ಲಿಪ್‌ಕಾರ್ಟ್‌ನಲ್ಲಿ, ರಿಯಲ್ ಮಿ 12 ಪ್ರೊ+ 15 ಪ್ರತಿಶತದಷ್ಟು ರಿಯಾಯಿತಿಯನ್ನು ಪಡೆದಿದೆ, ಇದರ ಬೆಲೆಯನ್ನು ರೂ. 31,999 ರಿಂದ 26,999ಕ್ಕೆ ಇಳಿಸಲಾಗಿದೆ.

ರಿಯಲ್ ಮಿ 12 ಪ್ರೊ+

ಆ್ಯಪಲ್ ಐಫೋನ್ 15 ಬೆಲೆ ಕಡಿತದ ಮೂಲಕ ಫ್ಲಿಪ್‌ಕಾರ್ಟ್‌ನಲ್ಲಿ 79,900 ರೂ. ಬದಲಿಗೆ ಕೇವಲ 65,999 ರೂ. ಗೆ ಖರೀದಿಸಬಹುದು.

ಐಫೋನ್ 15

ಫ್ಲಿಪ್‌ಕಾರ್ಟ್‌ ವ್ಯಾಲೆಂಟೈನ್ಸ್ ಡೇ ಮಾರಾಟದ ಸಮಯದಲ್ಲಿ, ಮೋಟೋರೊಲ G34 5G ಮೇಲೆ 3,000 ರೂ. ಇಳಿಕೆ ಮಾಡಲಾಗಿದ್ದು, ರೂ. 11,999 ಕ್ಕೆ ನಿಮ್ಮದಾಗಿಸಬಹುದು.

ಮೋಟೋರೊಲ G34 5G

ಗ್ಯಾಲಕ್ಸಿ S21 FE ಶೇಕಡಾ 57 ರಷ್ಟು ರಿಯಾಯಿತಿಯನ್ನು ಪಡೆದಿದೆ. ಇದರ ಮೂಲಬೆಲೆ ರೂ. 69,999. ಇದನ್ನೀಗ ಕೇವಲ ರೂ. 29,999ಕ್ಕೆ ಖರೀದಿಸಬಹುದು.

ಗ್ಯಾಲಕ್ಸಿ S21 FE

ಪೋಕೋ M6 ಪ್ರೊ 5Gಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಕೇವಲ 11,499 ರೂ. ಗೆ ಸೇಲ್ ಆಗುತ್ತಿದೆ. ಈ ಫೋನಿನ ಮೇಲೆ 32 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗಿದೆ.

ಪೋಕೋ M6 ಪ್ರೊ 5G

ರಿಯಲ್ ಮಿ 12 ಪ್ರೊ 5Gಬೆಲೆ ಕಡಿತದ ನಂತರ 25,999 ರೂ. ಗೆ ನಿಮ್ಮಸಾಗಿಸಬಹುದು. ಇದರ ಮೂಲಬೆಲೆ 29,999 ರೂ. ಆಗಿದೆ. ಶೇ. 13 ರಷ್ಟು ಡಿಸ್ಕೌಂಟ್ ಇದೆ.

ರಿಯಲ್ ಮಿ 12 ಪ್ರೊ 5G

ಫ್ಲಿಪ್‌ಕಾರ್ಟ್‌ನಲ್ಲಿ, ಮೊಟೊರೊಲಾ ಎಡ್ಜ್ 40 ನಿಯೋ ಬೆಲೆ ಈಗ 22,999 ರೂ. ರೂ. 5000 ರಿಯಾಯಿತಿ ಘೋಷಿಸಲಾಗಿದೆ. ಇದರ ಮೂಲ ಬೆಲೆ ರೂ. 27,999.

ಮೋಟೋ ಎಡ್ಜ್ 40 ನಿಯೋ

ವಿವೋ T2 ಪ್ರೊ 5G ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಬೆಲೆ ಕಡಿತದ ನಂತರ ರೂ. 23,999 ಕ್ಕೆ ನಿಮ್ಮದಾಗಿಸಬಹುದು. ಇದರ ಮೇಲೆ ಶೇ. 11 ರಷ್ಟು ಡಿಸ್ಕೌಂಟ್ ಘೋಷಿಸಲಾಗಿದೆ.

ವಿವೋ T2 ಪ್ರೊ 5G