19-02-2024

2024 ರಲ್ಲಿ 10,000 ರೂ. ಒಳಗೆ ಬಿಡುಗಡೆಯಾದ ಬೆಸ್ಟ್ ಸ್ಮಾರ್ಟ್​ಫೋನ್ಸ್

Author: Vinay Bhat

ಬಜೆಟ್ ಫೋನ್

ಭಾರತದಲ್ಲಿ ಬಜೆಟ್ ಬೆಲೆಯ ಫೋನುಗಳಿಗೆ ಭರ್ಜರಿ ಬೇಡಿಕೆ ಇದೆ. ಹೀಗಾಗಿ ಹೆಚ್ಚಿನ ಕಂಪನಿಗಳು ಇದಕ್ಕೆ ಪ್ರಾಮುಖ್ಯತೆ ನೀಡಿ ಕಡಿಮೆ ಬೆಲೆಯ ಫೋನನ್ನು ಅನಾವರಣ ಮಾಡುತ್ತದೆ.

ಕಡಿಮೆ ಬೆಲೆಯ ಫೋನ್

ನೀವು ರೂ. 10,000 ಕ್ಕಿಂತ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, 2024 ರಲ್ಲಿ ಲಾಂಚ್‌ ಆದ ಫೋನುಗಳನ್ನು ಪರಿಶೀಲಿಸಬಹುದು.

ಮೋಟೋ G24 ಪವರ್

ಈ ಫೋನಿನ 4GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ಗೆ ಕೇವಲ 8,999 ರೂ. 6000mAh ಬ್ಯಾಟರಿ ಇದೆ. 50MP ಪ್ರೈಮರಿ ಕ್ಯಾಮೆರಾ ನೀಡಲಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8

ಇದರ ಬೆಲೆ ಕೇವಲ ರೂ. 6749. ಮೀಡಿಯಾಟೆಕ್ G36 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಇದು 50MP ಪ್ರಾಥಮಿಕ ಕ್ಯಾಮೆರಾ ಅನ್ನು ಸಹ ಹೊಂದಿದೆ.

ಟೆಕ್ನೋ ಪಾಪ್ 8

ಈ ಫೋನಿನ ಬೆಲೆ 6,599 ರೂ. 5000mAh ಬ್ಯಾಟರಿ, ಆಕ್ಟಾ-ಕೋರ್ T606 ಪ್ರೊಸೆಸರ್, 12MP ಡ್ಯುಯಲ್-ರಿಯರ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಮೋಟೋ G04

ಈ ಫೋನಿನಲ್ಲಿ ಯುನಿಸಾಕ್ T606 ಪ್ರೊಸೆಸರ್ ಅನ್ನು 2xA75 1.6GHz + 6xA55 1.6GHz ಆಕ್ಟಾ-ಕೋರ್ CPU ಜೊತೆಗೆ ನೀಡಲಾಗಿದೆ. ಇದರ ಬೆಲೆ 6,999 ರೂ.

ರೆಡ್ಮಿ A3

ಫೆಬ್ರವರಿ 23 ರಿಂದ ಮಾರಾಟ ಕಾಣಲಿರುವ ಈ ಫೋನಿನ ಬೆಲೆ 9,299 ರೂ. ಇದು ಮೀಡಿಯಾಟೆಕ್ ಹಿಲಿಯೊ G36 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.