12-10-2023

ಡೇಟಾ ಖಾಲಿ ಆಗದಂತೆ ಭಾರತ-ಪಾಕ್ ಪಂದ್ಯ ವೀಕ್ಷಿಸಿ: ಹೇಗೆ?

ಭಾರತ-ಪಾಕಿಸ್ತಾನ

ಐಸಿಸಿ ಏಕದಿನ ವಿಶ್ವಕಪ್'ನಲ್ಲಿ ಅಕ್ಟೋಬರ್ 14 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.

ಹಾಟ್​ಸ್ಟಾರ್

ಇಂಡೋ-ಪಾಕ್ ಪಂದ್ಯದ ನೇರಪ್ರಸಾರವನ್ನು ಡಿಸ್ನಿ+ ಹಾಟ್​ಸ್ಟಾರ್​ನಲ್ಲಿ ಲೈವ್ ಸ್ಟ್ರೀಮ್ ಮಾಡಲಾಗುತ್ತಿದೆ. ಸುಮಾರು 8 ಗಂಟೆಗಳ ಕಾಲ ಪಂದ್ಯ ಇರುತ್ತದೆ.

ಡೇಟಾ ಖಾಲಿ

ಇದು 50 ಓವರ್​ಗಳ ಪಂದ್ಯ ಆಗಿರುವುದರಿಂದ ಪಂದ್ಯ ವೀಕ್ಷಿಸಲು ಹೆಚ್ಚಿನ ಡೇಟಾ ಅಗತ್ಯವಿರುತ್ತದೆ. 1GB, 1.5GB ಡೇಟಾ ಸಾಕಾಗುವುದಿಲ್ಲ.

ಡೇಟಾ ಖಾಲಿ ಆಗಲ್ಲ

ನಿಮ್ಮ ಪ್ಯಾಕ್​ನಲ್ಲಿ ಇರುವ ಡೇಟಾದಲ್ಲೇ ಇಂಡೋ-ಪಾಕ್ ಪಂದ್ಯ ಪ್ರತಿ ಕ್ಷಣವನ್ನೂ ವೀಕ್ಷಣೆ ಮಾಡಬಹುದು. ಅದು ಹೇಗೆ ನೋಡಿ.

ರೆಸಲ್ಯೂಶನ್

ಪಂದ್ಯ ವೀಕ್ಷಿಸುವಾಗ ಫುಲ್‌ ಹೆಚ್‌ಡಿ ಗುಣಮಟ್ಟದಲ್ಲಿ ನೋಡಬೇಡಿ. ಇದು ಹೆಚ್ಚಿನ ಡೇಟಾ ಖಾಲಿ ಮಾಡುತ್ತಿದೆ. ಗುಣಮಟ್ಟ ಕಡಿಮೆ ಇರಲಿ.

ಡೇಟಾ ಸೇವರ್ ಮೋಡ್

ಹೆಚ್ಚಿನ ಸ್ಮಾರ್ಟ್​ಫೋನ್​ಗಳಲ್ಲಿ ಕಡಿಮೆ ಡೇಟಾ ಮೋಡ್ ಅಥವಾ ಡೇಟಾ ಸೇವರ್ ಮೋಡ್‌ ಇರುತ್ತದೆ. ಇದನ್ನು ಆನ್ ಮಾಡಿದರೆ ಬ್ಯಾಕ್​ಗ್ರೌಂಡ್ ಆ್ಯಪ್ ರನ್ ಆಗದೆ ಡೇಟಾ ಉಳಿಸುತ್ತದೆ.

ಆಟೋ ಸಿಂಕ್ ಆಫ್

ಆಟೋ ಸಿಂಕ್ ಫೀಚರ್ಸ್‌ ಆಫ್ ಮಾಡಿದರೆ ಡೇಟಾ ಹೀರಿಕೆ ಕಡಿಮೆ ಆಗುತ್ತದೆ. ಆಗ ಆರಾಮವಾಗಿ ಭಾರತ-ಪಾಕ್ ಪಂದ್ಯ ವೀಕ್ಷಿಸಬಹುದು.

ಆಟೋ ಡೌನ್‌ಲೋಡ್ ಆಫ್

ಆಪರೇಟಿಂಗ್ ಸಿಸ್ಟಮ್ ಅಪ್‌ಡೇಟ್‌ಗಳು ಹೆಚ್ಚಿನ ಡೇಟಾವನ್ನು ಬಳಕೆ ಮಾಡುತ್ತವೆ. ಅವು GB ಗಳಲ್ಲಿರುತ್ತವೆ. ಇದನ್ನು ಆಫ್ ಮಾಡಿದರೆ ಹೆಚ್ಚಿನ ಡೇಟಾವನ್ನು ಉಳಿಸಬಹುದು.

ಗಮನಿಸಿ: ವಿವೋ V29 ಪ್ರೊ ಸೇಲ್ ದಿಢೀರ್ ಆರಂಭ