10-10-2023

ಗಮನಿಸಿ: ವಿವೋ V29 ಪ್ರೊ ಸೇಲ್ ದಿಢೀರ್ ಆರಂಭ

ವಿವೋ V29 ಪ್ರೊ

ವಿವೋ ಕಂಪನಿ ಕಳೆದ ವಾರ V29 ಸರಣಿಯಲ್ಲಿ ಬಿಡುಗಡೆ ಮಾಡಿದ ವಿವೋ V29 ಪ್ರೊ ಸ್ಮಾರ್ಟ್'ಫೋನ್ ಇದೀಗ ಖರೀದಿಗೆ ಸಿಗುತ್ತಿದೆ.

ಫ್ಲಿಪ್​ಕಾರ್ಟ್

ಇ ಕಾಮರ್ಸ್ ತಾಣ ಫ್ಲಿಪ್​ಕಾರ್ಟ್​ನಲ್ಲಿ ನಡೆಯುತ್ತಿರುವ ಬಿಗ್ ಬಿಲಿಯನ್ ಡೇಸ್ ಸೇಲ್​ನಲ್ಲಿ ವಿವೋ V29 ಪ್ರೊ ಮಾರಾಟ ಕಾಣುತ್ತಿದೆ.

ಬೆಲೆ ಎಷ್ಟು?

ವಿವೋ V29 ಪ್ರೊ 8GB RAM + 256GB ಸ್ಟೋರೇಜ್ ರೂಪಾಂತರಕ್ಕೆ 39,999 ರೂ. ಇದೆ. 12GB RAM + 256GB ಸ್ಟೋರೇಜ್​ಗೆ 42,999 ರೂ.

ಡಿಸ್ ಪ್ಲೇ

6.78-ಇಂಚಿನ 1.5K (1,260×2,800 ಪಿಕ್ಸೆಲ್‌ಗಳು) 3D ಕರ್ವ್ಡ್ AMOLED ಡಿಸ್ ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಹೊಂದಿದೆ.

ಪ್ರೊಸೆಸರ್

ವಿವೋ V29 ಪ್ರೊ ಸ್ಮಾರ್ಟ್​ಫೋನ್ ಬಲಿಷ್ಠವಾದ 4nm ಮೀಡಿಯಾಟೆಕ್ ಡೈಮೆನ್ಸಿಟಿ 8200 SoC ಮತ್ತು 12GB RAM ನಿಂದ ಚಾಲಿತವಾಗಿದೆ.

ಕ್ಯಾಮೆರಾ

OIS ಬೆಂಬಲದೊಂದಿಗೆ 50MP ಪ್ರಾಥಮಿಕ ಕ್ಯಾಮೆರಾ, 12MP ಪೋರ್ಟ್ರೇಟ್ ಮತ್ತು 8MP ವೈಡ್-ಆಂಗಲ್ ಲೆನ್ಸ್ ಇದೆ. ಆಟೋಫೋಕಸ್​ನೊಂದಿಗೆ 50MP ಸೆಲ್ಫಿ ಕ್ಯಾಮೆರಾ ಹೊಂದಿದೆ.

ಬ್ಯಾಟರಿ

80W ವೇಗದ ಚಾರ್ಜಿಂಗ್‌ನೊಂದಿಗೆ 4,600mAh ಬ್ಯಾಟರಿಯಿಂದ ಬೆಂಬಲಿತವಾಗಿದೆ. 18 ನಿಮಿಷಗಳಲ್ಲಿ 50 ಪ್ರತಿಶತದಷ್ಟು ಬ್ಯಾಟರಿ ತುಂಬುತ್ತದೆ.

ಕನೆಕ್ಟಿವಿಟಿ

ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ವೈ-ಫೈ, ಬ್ಲೂಟೂತ್ v5.3, GPS, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇನ್-ಡಿಸ್ಪ್ಲೇ ಫಿಂಗರ್​ಪ್ರಿಂಟ್ ಸಂವೇದಕ ಹೊಂದಿದೆ.

ಹಬ್ಬದ ಡಿಸ್ಕೌಂಟ್: ಈ ಫೋನ್ ಬೆಲೆ ಕೇವಲ 5,999 ರೂ.