ಮಾರುಕಟ್ಟೆಯಲ್ಲಿ ಬಿರುಗಾಳಿ ಎಬ್ಬಿಸಿದ ಬೆಂಡೆಬಲ್ ಸ್ಮಾರ್ಟ್‌ಫೋನ್

29-February-2024

Author: Vinay Bhat

ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸ ನೆಲೆಯಲ್ಲಿ ಮುಂದುವರೆಯುತ್ತಿದೆ. ನೂತನ ಆವಿಷ್ಕಾರಗಳಿಂದ ಹೊಸ ಉತ್ಪನ್ನಗಳು ಬರುತ್ತಿದ್ದು ಸ್ಮಾರ್ಟ್​ಫೋನ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆವೇ ಆಗುತ್ತಿದೆ.

ಆವಿಷ್ಕಾರ

ಸದ್ಯದಲ್ಲಿ ಮಾರುಕಟ್ಟೆಗೆ ರೋಲ್ ಮಾಡಬಹುದಾದ, ಅಂದರೆ ಫೋಲ್ಡಿಂಗ್ ಫೋನ್​ಗಳು ಬರುತ್ತಿವೆ. ಮೋಟೋರೊಲ ಇಂತಹ ಸಾಹಸಕ್ಕೆ ಕೈ ಹಾಕಿದೆ.

ಬೆಂಡೆಬಲ್ ಫೋನ್

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2024 ಈ ವರ್ಷ ಕೆಲವು ಅದ್ಭುತವಾದ ಗ್ಯಾಜೆಟ್‌ಗಳನ್ನು ಪ್ರದರ್ಶಿಸುತ್ತಿದೆ. ಇದರಲ್ಲಿ ಮೋಟೋರೊಲದ ಬೆಂಡಬಲ್ ಫೋನ್ ಕೂಡ ಒಂದು.

ಮೊಬೈಲ್ ವರ್ಲ್ಡ್ ಕಾಂಗ್ರೆಸ್

ಇದು ಮೋಟೋರೊಲದ ವಾಚ್‌ನಂತೆ ಧರಿಸಬಹುದಾದ ಸ್ಮಾರ್ಟ್‌ಫೋನ್. ಬಳಕೆದಾರರು ಈ ಫೋನ್ ಅನ್ನು ತಮಗೆ ಇಷ್ಟ ಬಂದಂತೆ ಮಡಚಿಕೊಳ್ಳಬಹುದು.

ಧರಿಸಬಹುದು

ಇದರಲ್ಲಿ ಪೂರ್ಣ HD+ POLED ಡಿಸ್ ಪ್ಲೇಯನ್ನು ನೀಡಲಾಗಿದೆ. ಇದು 6.9 ಇಂಚಿನದ್ದಾಗಿದ್ದು, ಮಡಿಸಿದಾಗ ಡಿಸ್ ಪ್ಲೇ ಗಾತ್ರವು 4.6 ಇಂಚು ಆಗುತ್ತದೆ.

ಡಿಸ್ ಪ್ಲೇ

ಈ ಸ್ಮಾರ್ಟ್‌ಫೋನ್​ನಲ್ಲಿ ಕೃತಕ ಬುದ್ಧಿಮತ್ತೆ ಹೊಂದಿರುವ ಕ್ಯಾಮೆರಾವನ್ನು ಕೂಡ ನೀಡಲಾಗಿದೆ ಎಂದು ಹೇಳಲಾಗಿದೆ. ಡಿಸ್ ಪ್ಲೇಯನ್ನು ಎಷ್ಟು ಮಡಚಿದರೂ ಯಾವುದೇ ತೊಂದರೆಯಾಗದಂತೆ ಅಭಿವೃದ್ಧಿ ಪಡಿಸಲಾಗಿದೆ.

ಎಐ ಕ್ಯಾಮೆರಾ

ಸ್ಮಾರ್ಟ್ ವಾಚ್ ನಂತೆ ಕಾಣುವ ಈ ಫೋನಿನಲ್ಲಿ ಬಳಕೆದಾರರು ತಾವು ಧರಿಸಿರುವ ಡ್ರೆಸ್​ನ ಬಣ್ಣಗಳಿಗೆ ಅನುಗುಣವಾಗಿ ತಮ್ಮ ನೆಚ್ಚಿನ ಫೋಟೋಗಳು ಮತ್ತು ವಾಲ್ ಪೇಪರ್ ಅನ್ನು ಸೆಟ್ ಮಾಡಬಹುದು.

ಸ್ಮಾರ್ಟ್ ವಾಚ್