03-10-2023

ಕೆಂಪು ಬಣ್ಣದಲ್ಲಿ ಕಣ್ಣು ಕುಕ್ಕುತ್ತಿದೆ ಒನ್​ಪ್ಲಸ್ 11R ಫೋನ್

ಒನ್'ಪ್ಲಸ್ 11R

ಒನ್'ಪ್ಲಸ್ ಕಂಪನಿ ಭಾರತದಲ್ಲಿ ಹೊಚ್ಚ ಹೊಸ ಒನ್'ಪ್ಲಸ್ 11R ಸೋಲಾರ್ ರೆಡ್ 5G ಪರಿಚಯಿಸಲು ತಯಾರಾಗಿದೆ. ಕೆಂಪು ಬಣ್ಣದ ಈ ಫೋನ್ ಫೋಟೋ ವೈರಲ್ ಆಗುತ್ತಿದೆ.

18GB RAM

ಅತ್ಯಂತ ಬಲಿಷ್ಠವಾಗಿರುವ ಈ ಫೋನ್ ಬರೋಬ್ಬರಿ 18GB RAM ಹೊಂದಿದ್ದು 512GB ROM ಆಯ್ಕೆ ನೀಡಲಾಗಿದೆ. ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಪ್ರೊಸೆಸರ್

ಈ ಫೋನ್ ಸ್ನಾಪ್‌ಡ್ರಾಗನ್ 8+ Gen 1 ಪ್ರೊಸೆಸರ್‌ನಿಂದ ಚಾಲಿತವಾಗಿದೆ ಮತ್ತು 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ

5000mAh ಬ್ಯಾಟರಿ ಮತ್ತು 100W SUPERVOOC ಚಾರ್ಜರ್‌ನೊಂದಿಗೆ ಬರುತ್ತದೆ. ಇದು 25 ನಿಮಿಷಗಳಲ್ಲಿ 100 ಪ್ರತಿಶತ ಚಾರ್ಜ್ ಮಾಡುತ್ತದೆ.

ಲೆದರ್ ಬ್ಯಾಕ್ ಪ್ಯಾನೆಲ್‌

ಕೆಂಪು ಬಣ್ಣದಲ್ಲಿ ಬರಲಿರುವ ಈ ಫೋನ್ ನೋಡಲು ಸುಂದರವಾಗಿದೆ. ಅಲ್ಲದೆ ಬಳಕೆದಾರರಿಗೆ ಸುಲಭವಾಗಲು ಇದು ಲೆದರ್ ಬ್ಯಾಕ್ ಪ್ಯಾನೆಲ್‌ನೊಂದಿಗೆ ಬರುತ್ತದೆ.

ಅ. 7ಕ್ಕೆ ಬಿಡುಗಡೆ

ಒನ್'ಪ್ಲಸ್ 11R 5ಜಿ ಫೋನ್ ಅಕ್ಟೋಬರ್ 7 ರಂದು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ ಎಂದು ಕಂಪನಿ ಹೇಳಿದೆ.

ಫ್ಲಿಪ್​ಕಾರ್ಟ್-ಅಮೆಜಾನ್

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ಈ ಫೋನ್ ಸೇಲ್ ಕಾಣಲಿದೆ.

ರಾತ್ರಿಯಿಡೀ ಫೋನ್ ಚಾರ್ಜ್​ಗೆ ಹಾಕಿ ಮಲಗುತ್ತೀರಾ?