16-10-2023

ಶಾಕ್: ಒನ್​ಪ್ಲಸ್​ನ ಚೊಚ್ಚಲ ಮಡುವ ಫೋನಿನ ಬೆಲೆ ನೋಡಿ

ಒನ್'ಪ್ಲಸ್ ಓಪನ್

ಒನ್'ಪ್ಲಸ್ ಕಂಪನಿಯ ಮೊಟ್ಟ ಮೊದಲ ಫೋಲ್ಡಬಲ್ ಸ್ಮಾರ್ಟ್‌ಫೋನ್ ಒನ್'ಪ್ಲಸ್ ಓಪನ್ ಬಿಡುಗಡೆ ದಿನಾಂಕವನ್ನು ಕಂಪನಿ ಪ್ರಕಟಿಸಿದೆ.

ಅ.19ಕ್ಕೆ ರಿಲೀಸ್

ಒನ್'ಪ್ಲಸ್ ಓಪನ್ ಇದೇ ಅ. 19 ರಂದು ಮುಂಬೈನಲ್ಲಿ 7.30PM IST ಕ್ಕೆ ಬಿಡುಗಡೆಯಾಗಲಿದೆ. ಈ ಮೂಲಕ, ಒನ್​ಪ್ಲಸ್ ಕಂಪನಿ ಮಡಚಬಹುದಾದ ಫೋನ್‌ಗಳ ಜಗತ್ತಿಗೆ ಪ್ರವೇಶಿಸಲಿದೆ.

ಬೆಲೆ ಎಷ್ಟು?

ಎಲ್ಲರನ್ನು ನಿಬ್ಬೆರಗಾಗಿಸಿದ್ದು ಒನ್​ಪ್ಲಸ್ ಒಪನ್ ಬೆಲೆ. ಟಿಪ್‌ಸ್ಟರ್ ಪ್ರಕಾರ, ಒನ್​ಪ್ಲಸ್​ ಓಪನ್ ಫೋನಿಗೆ ಭಾರತದಲ್ಲಿ 1,39,999 ರೂ. ಇರಲಿದೆಯಂತೆ.

ದುಬಾರಿ ಫೋನ್

ಸದ್ಯ ಒನ್​ಪ್ಲಸ್​ ಕಂಪನಿಯ ದುಬಾರಿ ಫೋನ್ ಎಂದರೆ ಅದು ಒನ್​ಪ್ಲಸ್ 10 ಪ್ರೊ. ಇದರ ಬೆಲೆ 71,999 ರೂ. ಅಂತೆಯೆ ಆದರೀಗ ಒನ್​ಪ್ಲಸ್ ಒಪನ್ ಬೆಲೆ ಲಕ್ಷದಲ್ಲಿದೆ.

ಪ್ರೊಸೆಸರ್

ಒನ್​ಪ್ಲಸ್ ಓಪನ್ ಫೋನ್ ಬಲಿಷ್ಠವಾದ ಸ್ನಾಪ್​ಡ್ರಾಗನ್ 8+ Gen 2 ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗಿದೆ.

100W ಚಾರ್ಜರ್

ಈ ಫೋನ್ 100W SuperVOOC ಚಾರ್ಜಿಂಗ್​ನೊಂದಿಗೆ 4800mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿರಬಹುದು. ವೈರ್‌ಲೆಸ್ ಚಾರ್ಜಿಂಗ್ ಆಯ್ಕೆ ಇದೆ.

ಡಿಸ್ ಪ್ಲೇ:

ಒನ್​ಪ್ಲಸ್ ಓಪನ್‌ನ ಒಳಗಿನ ಡಿಸ್ ಪ್ಲೇ 7.82-ಇಂಚಿನ OLED ಆಗಿರಲಿದೆ. ಹೊರಗಿನ ಡಿಸ್ ಪ್ಲೇ 6.31 ಅನ್ನು ಹೊಂದಿರುತ್ತದೆ ಎಂಬ ಮಾತಿದೆ.

ಕ್ಯಾಮೆರಾ

ಈ ಫೋನಿನ ಹಿಂಭಾಗವು ಹ್ಯಾಸೆಲ್‌ಬ್ಲಾಡ್‌ನಿಂದ ಟ್ಯೂನ್ ಮಾಡಲಾದ ಮೂರು ಕ್ಯಾಮೆರಾ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ. ಮುಖ್ಯ ಕ್ಯಾಮೆರಾ 50-ಮೆಗಾಪಿಕ್ಸೆಲ್ (IMX 890) ಇರಲಿದೆ.

6000mAh ಬ್ಯಾಟರಿ: 20,000 ಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಫೋನ್