ಗೂಗಲ್ ಮ್ಯಾಪ್ ಬಳಸಲು ಇಂಟರ್ನೆಟ್ ಬೇಡ: ಇಲ್ಲಿದೆ ಟ್ರಿಕ್

02-March-2024

Author: Vinay Bhat

ನಿಮ್ಮ ಗಮ್ಯಸ್ಥಾನವನ್ನು ತಲುಪಲು ನೀವು ನ್ಯಾವಿಗೇಷನ್ ಅಪ್ಲಿಕೇಶನ್ ಗೂಗಲ್ ಮ್ಯಾಪ್ ಬಳಸುತ್ತಿದ್ದರೆ ಇಂದು ಈ ಟ್ರಿಕ್ ಅನ್ನು ಗಮನಿಸಿ.

ಟ್ರಿಕ್ ಗಮನಿಸಿ

ಇಂಟರ್ನೆಟ್ ಇಲ್ಲದೆ ಗೂಗಲ್ ಮ್ಯಾಪ್ ಹೇಗೆ ರನ್ ಮಾಡುವುದು ಎಂದು ನಿಮಗೆ ತಿಳಿದಿದೆಯೇ? ಗೂಗಲ್ ಗೂಗಲ್ ಮ್ಯಾಪ್'ನಲ್ಲಿ ಈ ರಹಸ್ಯ ವೈಶಿಷ್ಟ್ಯವಿದೆ.

ಆಫ್ ಲೈನ್ ಮ್ಯಾಪ್

ಇದಕ್ಕಾಗಿ ನೀವು ಗೂಗಲ್ ಮ್ಯಾಪ್ ಅಪ್ಲಿಕೇಶನ್ ತೆರೆಯಿರಿ, ಪ್ರೊಫೈಲ್ ಚಿತ್ರವು ಮೇಲಿನ ಬಲಭಾಗದಲ್ಲಿ ಗೋಚರಿಸುತ್ತದೆ, ನೀವು ಆ ಚಿತ್ರದ ಮೇಲೆ ಟ್ಯಾಪ್ ಮಾಡಬೇಕು.

ಹಂತ 1

ಪ್ರೊಫೈಲ್ ಚಿತ್ರದ ಮೇಲೆ ಟ್ಯಾಪ್ ಮಾಡಿದ ನಂತರ ಆಫ್‌ಲೈನ್ ಮ್ಯಾಪ್ ಆಯ್ಕೆ ಇದೆ. ಅದರ ಮೇಲೆ ಕ್ಲಿಕ್ ಮಾಡಿದ ನಂತರ, Select Your Own Map ಕ್ಲಿಕ್ ಮಾಡಿ.

ಹಂತ 2

ನಂತರ ಬಾಕ್ಸ್‌ನಲ್ಲಿ ತೋರಿಸಿರುವ ಮ್ಯಾಪ್ ಅನ್ನು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಹೊಂದಿಸಲು ನಿಮಗೆ ಸಾಧ್ಯವಾಗುತ್ತದೆ.

ಹಂತ 3

ಬಾಕ್ಸ್‌ ಒಳಗೆ ನಿಮಗೆ ಬೇಕಾಗ ಜಾಗವನ್ನು ಸೆಲೆಕ್ಟ್ ಮಾಡಿ ನಂತರ ಡಿಸ್'ಪ್ಲೇ ಮೇಲೆ ಗೋಚರಿಸುವ ಡೌನ್‌ಲೋಡ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 4

ಆಫ್‌ಲೈನ್ ನಕ್ಷೆಗಳನ್ನು ಡೌನ್‌ಲೋಡ್ ಮಾಡಲು ಫ್ರೀ ಸ್ಪೇಸ್ ಬೇಕಾಗುತ್ತದೆ, ಮ್ಯಾಪ್ ಡೌನ್‌ಲೋಡ್ ಮಾಡಿದ ನಂತರ ನೀವು ಇಂಟರ್ನೆಟ್ ಇಲ್ಲದೆ ಉಪಯೋಗಿಸಬಹುದು.

ಹಂತ 5