11-02-2024

ಐಫೋನ್​ನಂತೆ ಕಾಣುವ 7,000 ರೂ. ಬೆಲೆಯ ಈ ಫೋನ್ ಹೇಗಿದೆ?

Author: Vinay Bhat

ಟೆಕ್ನೋ ಪಾಪ್ 8

ಟೆಕ್ನೋ ಕಂಪನಿ ಬಜೆಟ್ ಬೆಲೆಗೆ ಹೊಸ ಟೆಕ್ನೋ ಪಾಪ್ 8 ಫೋನನ್ನು ಬಿಡುಗಡೆ ಮಾಡಿದೆ. ಈ ಫೋನ್ ಹೇಗಿದೆ?, ಬಳಸಿದಾಗ ಏನು ಅನುಭವ ಆಯಿತು?.

ವಿನ್ಯಾಸ

ಈ ಫೋನ್‌ನ ಹಿಂಭಾಗವು ಐಫೋನ್‌ನಂತೆ ಕಾಣುತ್ತದೆ, ಮ್ಯಾಟ್ ಮತ್ತು ಬ್ರೈಟ್ ಫಿನಿಶಿಂಗ್ ಫೋನ್‌ಗೆ ಉತ್ತಮ ನೋಟವನ್ನು ನೀಡುತ್ತದೆ.

ಡಿಸ್'ಪ್ಲೇ

7 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ, ನಿಮಗೆ 6.6 ಇಂಚಿನ ದೊಡ್ಡ IPS LCD ಡಿಸ್​ಪ್ಲೇ ಸಿಗುತ್ತದೆ, ವಿಡಿಯೋಗಳನ್ನು ವೀಕ್ಷಿಸುವಾಗ ಡಿಸ್​ಪ್ಲೇಯು ಯಾವುದೇ ತೊಂದರೆ ಉಂಟುಮಾಡುವುದಿಲ್ಲ.

ಚಿಪ್ಸೆಟ್

ಈ ಫೋನ್ Unisoc T606 ಚಿಪ್‌ಸೆಟ್ ಮತ್ತು HiOS 13 ಬೆಂಬಲವನ್ನು ಹೊಂದಿದೆ. ಫೋನ್ ಅನ್ನು ಸಾಮಾನ್ಯವಾಗಿ ರನ್ ಮಾಡಿದಾಗ ಯಾವುದೇ ಹ್ಯಾಂಗ್ ಆಗುವುದಿಲ್ಲ.

ಕ್ಯಾಮೆರಾ

12MP AI ಡ್ಯುಯಲ್ ಕ್ಯಾಮೆರಾವನ್ನು ಸುಧಾರಿಸಬಹುದಿತ್ತು, 8MP ಸೆಲ್ಫಿ ಕ್ಯಾಮೆರಾ ಫೋನ್‌ನ ಬೆಲೆಯನ್ನು ಪರಿಗಣಿಸಿದರೆ ಉತ್ತಮವಾಗಿದೆ.

ಬ್ಯಾಟರಿ

5000mAh ಬ್ಯಾಟರಿಯು ಇಡೀ ದಿನ ಬರುತ್ತದೆ, ಆದರೆ 10W ಚಾರ್ಜಿಂಗ್ ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಸುಮಾರು 2.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ರೇಟಿಂಗ್

ಇದರ DTS ಸ್ಪೀಕರ್ ಅದ್ಭುತ ಕಾರ್ಯಕ್ಷಮತೆಯನ್ನು ನೀಡುತ್ತದೆ, 4GB+64GB ಮಾದರಿಯ ಬೆಲೆ ₹ 6,599, ನಾವು ಈ ಫೋನ್‌ಗೆ 5 ಸ್ಟಾರ್​ಗಳಲ್ಲಿ 3.5 ನೀಡುತ್ತೇವೆ.