ನಿಮ್ಮ ಮೊಬೈಲ್​ನ SAR ಮೌಲ್ಯ ಎಷ್ಟಿರಬೇಕು?: ಹೆಚ್ಚಿದ್ದರೆ ಎಚ್ಚರ

10 February 2024

Author: Vinay Bhat

ಸ್ಮಾರ್ಟ್‌ಫೋನ್‌ಗಳ ಬಗ್ಗೆ ಅನೇಕರು ನಮಗೆ ಹಲವು ವಿಚಾರ ತಿಳಿದಿದೆ ಎಂಬ ಭಾವಿಸುತ್ತಾರೆ. ಆದರೆ ಮೊಬೈಲ್ ಫೋನ್‌ಗಳು ಎಷ್ಟು ವಿಕಿರಣವನ್ನು ಹೊರಸೂಸುತ್ತವೆ ಎಂದು ನಿಮಗೆ ತಿಳಿದಿದೆಯೇ?.

ಫೋನ್‌ ವಿಕಿರಣ

ಮೊಬೈಲ್ ನಿಂದ ಹೊರಹೊಮ್ಮುವ ವಿಕಿರಣ ಹೆಚ್ಚಿದ್ದರೆ ಇದು ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಭಾರತದಲ್ಲಿ ಮೊಬೈಲ್ ವಿಕಿರಣದ ಮಿತಿ ಎಷ್ಟು?.

ಆರೋಗ್ಯ

SAR ಎಂದರೆ ನಿರ್ದಿಷ್ಟ ಹೀರಿಕೊಳ್ಳುವ ದರ (Specific Absorption Rates). ಫೋನ್‌ ಹೊರಸೂಸುವ ವಿಕಿರಣವನ್ನು SAR ಮೌಲ್ಯದಲ್ಲಿ ಅಳೆಯಲಾಗುತ್ತದೆ.

SAR ಎಂದರೇನು?

ಪ್ರತಿ ಫೋನ್‌ನ ಬಾಕ್ಸ್‌ನಲ್ಲಿ SAR ಮೌಲ್ಯವನ್ನು ಬರೆಯಲಾಗುತ್ತದೆ. ನೀವು ಬಾಕ್ಸ್ ಹೊಂದಿಲ್ಲದಿದ್ದರೆ ಕೋಡ್ ಮೂಲಕ ಕೂಡ ಕಂಡುಹಿಡಿಯಬಹುದು.

ಎಲ್ಲಿರುತ್ತದೆ?

ನಿಮ್ಮ ಫೋನ್ ಎಷ್ಟು ವಿಕಿರಣವನ್ನು ಹೊರಸೂಸುತ್ತಿದೆ ಎಂಬುದನ್ನು ಕಂಡುಹಿಡಿಯಲು, ಡಯಲ್ ಪ್ಯಾಡ್ ಅನ್ನು ತೆರೆದು *#07# ಅನ್ನು ಒತ್ತಿರಿ.

ಕೋಡ್ ಏನು?

ನೀವು ಕೋಡ್ ಅನ್ನು ಡಯಲ್ ಮಾಡಿದ ತಕ್ಷಣ, ಪಾಪ್-ಅಪ್ ಅಧಿಸೂಚನೆಯು ಡಿಸ್ಪೇ ಮೇಲೆ ಕಾಣಿಸಿಕೊಳ್ಳುತ್ತದೆ, ಅದರಲ್ಲಿ ನಿಮ್ಮ ಫೋನ್‌ನ SAR ಮೌಲ್ಯ ಇರುತ್ತದೆ.

ಈ ರೀತಿ ತಿಳಿಯುತ್ತದೆ

ಭಾರತದಲ್ಲಿ, SAR ಮೌಲ್ಯದ ಮಿತಿಯನ್ನು ಪ್ರತಿ ಕಿಲೋಗ್ರಾಂಗೆ 1.6 ವ್ಯಾಟ್‌ಗಳಿಗೆ (W/kg) ನಿಗದಿಪಡಿಸಲಾಗಿದೆ. ಫೋನ್ ಈ ಮಿತಿಗಿಂತ ಹೆಚ್ಚು ವಿಕಿರಣವನ್ನು ಹರಡುತ್ತಿದ್ದರೆ ನಿಮ್ಮ ಆರೋಗ್ಯಕ್ಕೆ ಹಾನಿಯಾಗಬಹುದು.

ಎಷ್ಟಿರಬೇಕು?