30-09-2023

ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಸ್ಪಾರ್ಕ್‌ 20C ಫೋನ್

ಹೊಸ ಫೋನ್

ಟೆಕ್ನೋ ಕಂಪನಿಯ ಹೊಸ ಸ್ಪಾರ್ಕ್‌ 20C ಸ್ಮಾರ್ಟ್‌ಫೋನ್‌ ಇದೀಗ ಗೀಕ್‌ಬೆಂಚ್‌ ಮತ್ತು ಬ್ಲೂಟೂತ್‌ ಎಸ್‌ಐಜಿ ಪ್ರಮಾಣೀಕರಣ ಸೈಟ್‌ಗಳಲ್ಲಿ ಕಾಣಿಸಿಕೊಂಡಿದೆ.

ರಿಲೀಸ್ ಯಾವಾಗ?

ಟೆಕ್ನೋ ಸ್ಪಾರ್ಕ್‌ 20C ಸ್ಮಾರ್ಟ್‌ಫೋನ್‌ ಆಕ್ಟೋಬರ್‌ ಅಥವಾ ನವೆಂಬರ್‌ ಮೊದಲ ವಾರದಲ್ಲಿ ಭಾರತಕ್ಕೆ ಎಂಟ್ರಿ ನೀಡುವ ನಿರೀಕ್ಷೆಯಿದೆ.

ಡಿಸ್ ಪ್ಲೇ

ಟೆಕ್ನೋ ಸ್ಪಾರ್ಕ್‌ 20C ಸ್ಮಾರ್ಟ್‌ಫೋನ್‌ 6.67  ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.

ಪ್ರೊಸೆಸರ್

ಟೆಕ್ನೋ ಸ್ಪಾರ್ಕ್‌ 20C ಸ್ಮಾರ್ಟ್‌ಫೋನ್‌ ಮೀಡಿಯಾಟೆಕ್ ಹೆಲಿಯೊ P35 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.

ಕ್ಯಾಮೆರಾ

ಟೆಕ್ನೋ ಸ್ಪಾರ್ಕ್‌ 20C ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಸೆಲ್ಫಿ ಕ್ಯಾಮೆರಾ ಕೂಡ ಇದೆ.

50 ಮೆಗಾಪಿಕ್ಸೆಲ್

ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿರಲಿದೆ. ಎರಡನೇ ಕ್ಯಾಮೆರಾ ತಿಳಿದಿಲ್ಲ. 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಇದೆ.

ಬ್ಯಾಟರಿ

ಟೆಕ್ನೋ ಸ್ಪಾರ್ಕ್‌ 20C 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 18W ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ಪ್ರಪಂಚದಲ್ಲಿ ಸಖತ್ ಟ್ರೆಂಡಿಂಗ್​ನಲ್ಲಿರುವ ಫೋನ್‌ಗಳು ಯಾವುವು ನೋಡಿ