01-10-2023

ಅಕ್ಟೋಬರ್ 4ರಂದು ಒಂದೇ ದಿನ 5 ಫೋನ್ ರಿಲೀಸ್ ಆಗಲಿದೆ

ಮುಂಬರುವ ಫೋನುಗಳು

ನೀವು ಹೊಸ ಮೊಬೈಲ್ ಖರೀದಿಸಲು ಯೋಚಿಸುತ್ತಿದ್ದರೆ ಸ್ವಲ್ಪ ಸಮಯ ಕಾಯಿರಿ, ಮುಂದಿನ ವಾರ ಒಂದಲ್ಲ ಹಲವಾರು ಹೊಸ ಫೋನ್‌ಗಳು ಬಿಡುಡೆ ಆಗಲಿದೆ.

ಒಂದೇ ದಿನ 5ಫೋನ್

ಮುಂದಿನ ವಾರ ಅಕ್ಟೋಬರ್ 4 ರಂದು ಭಾರತದಲ್ಲಿ ಬರೋಬ್ಬರಿ 5 ಸ್ಮಾರ್ಟ್​ಫೋನ್​ಗಳು ಬಿಡುಗಡೆ ಆಗಲಿದೆ. ಅವುಗಳು ಯಾವುವು ಎಂಬುದನ್ನು ನೋಡೋಣ.

ಗ್ಯಾಲಕ್ಸಿ S23 FE

ಸ್ಯಾಮ್‌ಸಂಗ್‌ನ ಹೊಸ ಮತ್ತು ಪ್ರೀಮಿಯಂ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ S23 FE ಅಕ್ಟೋಬರ್ 4 ಕ್ಕೆ ರಿಲೀಸ್ ಆಗಲಿದೆ. ಈ ಫೋನ್ ಆಕರ್ಷಕ ಫೀಚರ್​ಗಳಿಂದ ಕೂಡಿದೆ.

ಪಿಕ್ಸೆಲ್ 8 ಸರಣಿ

ಗೂಗಲ್‌ನ ಹೊಸ ಪಿಕ್ಸೆಲ್ 8 ಸರಣಿ ಕೂಡ ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ. ಈ ಸರಣಿಯಲ್ಲಿ ಪಿಕ್ಸೆಲ್ 8 ಮತ್ತು ಪಿಕ್ಸೆಲ್ 8 ಪ್ರೊ ಎಂಬ ಎರಡು ಫೋನಿದೆ.

ಪಿಕ್ಸೆಲ್ 8 ಸರಣಿ ಬೆಲೆ

ಮಾಹಿತಿಯ ಪ್ರಕಾರ, ಪಿಕ್ಸೆಲ್ 8 ಬೆಲೆ 65,000 ರಿಂದ 70,000 ರೂ. ವರೆಗೆ ಇರಬಹುದು. ಪಿಕ್ಸೆಲ್ 8 ಪ್ರೊ ಬೆಲೆ 90,000 ರಿಂದ 95,000 ರೂ. ಎನ್ನಲಾಗಿದೆ.

ವಿವೋ V29 ಸರಣಿ

ವಿವೋ ಸರಣಿಯು ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ. ಈ ಸರಣಿಯಲ್ಲಿ ವಿವೋ V29 ಮತ್ತು ವಿವೋ V29 ಪ್ರೊ ಸ್ಮಾರ್ಟ್‌ಫೋನ್‌ಗಳು ಇದೆ.

ವಿವೋ V29 ಫೀಚರ್ಸ್

ಈ ಸರಣಿಯು 3D ಕರ್ವ್ಡ್ ಡಿಸ್ ಪ್ಲೇ, ಅಲ್ಟ್ರಾ ಸ್ಲೀಕ್ ಡಿಸೈನ್, ಔರಾ ಲೈಟ್ ಮುಂತಾದ ವೈಶಿಷ್ಟ್ಯಗಳೊಂದಿಗೆ ಪ್ಯಾಕ್ ಆಗಿದೆ ಎಂದು ವಿವೋ ಅಧಿಕೃತವಾಗಿ ಹೇಳಿದೆ.

ಧೂಳೆಬ್ಬಿಸಲು ಬರುತ್ತಿದೆ ಟೆಕ್ನೋ ಸ್ಪಾರ್ಕ್‌ 20C ಫೋನ್