ಸ್ವಲ್ಪ ಕಾಯಿರಿ: ಮುಂದಿನ ವಾರ ಬರಲಿವೆ ಆಕರ್ಷಕ ಫೋನುಗಳು

12 May 2024

Author: Vinay Bhat

ನಿಮ್ಮ ಹಳೆಯ ಫೋನ್ ಅನ್ನು ಬದಲಾಯಿಸಲು ಯೋಜಿಸುತ್ತಿರುವಿರಾ?. ಹಾಗಾದರೆ ಸ್ವಲ್ಪ ಕಾಯಿರಿ, ಮುಂದಿನ ವಾರ 2 ಹೊಸ ಫೋನ್‌ಗಳು ರಿಲೀಸ್ ಆಗಲಿವೆ.

ಹೊಸ ಫೋನ್

Pic credit - Googlr

ಐಕ್ಯೂ ಬ್ರ್ಯಾಂಡ್‌ನ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ 16 ಮೇ 2024 ರಂದು ಬಿಡುಗಡೆಯಾಗಲಿದೆ. ಇದನ್ನು ಇ ಕಾಮರ್ಸ್ ತಾಣ ಅಮೆಜಾನ್​ನಿಂದ ಖರೀದಿಸಬಹುದು.

ಐಕ್ಯೂ Z9x

Pic credit - Googlr

ಐಕ್ಯೂ Z9xಫೋನ್ 6000mAh ಬ್ಯಾಟರಿ, ಸ್ನಾಪ್‌ಡ್ರಾಗನ್ 6 ಜನರೇಷನ್ 1 ಪ್ರೊಸೆಸರ್, 8GB ವರ್ಚುವಲ್ RAM, 6.72 ಇಂಚಿನ ಡಿಸ್​ಪ್ಲೇಯನ್ನು ಹೊಂದಿದೆ.

ಫೀಚರ್ಸ್ ಏನಿದೆ?

Pic credit - Googlr

ಈ ಫೋನ್​ನಲ್ಲಿ 44 ವ್ಯಾಟ್ ವೇಗದ ಚಾರ್ಜ್ ಬೆಂಬಲವಿದೆ. 120 Hz ರಿಫ್ರೆಶ್ ರೇಟ್ ಮತ್ತು 50MP ಹಿಂಬದಿಯ ಕ್ಯಾಮೆರಾದಂತಹ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ.

ಫಾಸ್ಟ್ ಚಾರ್ಜರ್

Pic credit - Googlr

ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳು ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಲಭ್ಯವಿರುತ್ತವೆ. ಇದರ ಹೊರತಾಗಿ, ಈ ಫೋನ್ 2 ವರ್ಷಗಳವರೆಗೆ ಆಂಡ್ರಾಯ್ಡ್ ನವೀಕರಣಗಳನ್ನು ನೀಡುತ್ತದೆ.

ಐಕ್ಯೂ Z9x ಫೀಚರ್ಸ್

Pic credit - Googlr

ಮುಂದಿನ ವಾರ 17ನೇ ಮೇ 2024 ರಂದು ಸ್ಯಾಮ್‌ಸಂಗ್ ಎಫ್ ಸರಣಿಯ ಗ್ಯಾಲಕ್ಸಿ F55ಫೋನ್ ಗ್ರಾಹಕರಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ.

ಗ್ಯಾಲಕ್ಸಿ F55

Pic credit - Googlr

ಈ ಫೋನ್‌ನ ಬೆಲೆ ಸೋರಿಕೆಯಾಗಿದೆ. 8GB/128GB ರೂಪಾಂತರದ ಬೆಲೆ 26,999 ರೂ., 8GB/256GB ರೂಪಾಂತರದ ಬೆಲೆ ರೂ. 29,999 ಆಗಿದೆ.

ಗ್ಯಾಲಕ್ಸಿ F55 ಬೆಲೆ

Pic credit - Googlr

ಸ್ಯಾಮ್​ಸಂಗ್ ಕಂಪನಿ ಈ ಫೋನ್‌ನಲ್ಲಿ ಲಭ್ಯವಿರುವ ವೈಶಿಷ್ಟ್ಯಗಳ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇದು ಮಧ್ಯಮ ಬೆಲೆಯಿಂದ ಕೂಡಿದೆ.

ಗ್ಯಾಲಕ್ಸಿ F55 ಫೀಚರ್ಸ್

Pic credit - Googlr