skin care 3

Author: Sushma Chakre

ಚಳಿಗಾಲದಲ್ಲಿ ನೀವು ಮಾಡುವ ಈ ತಪ್ಪುಗಳಿಂದ ಚರ್ಮ ಒಣಗಬಹುದು ಎಚ್ಚರ!

ಚಳಿಗಾಲದಲ್ಲಿ ನೀವು ಮಾಡುವ ಈ ತಪ್ಪುಗಳಿಂದ ಚರ್ಮ ಒಣಗಬಹುದು ಎಚ್ಚರ!

30 Dec 2023

Author: Sushma Chakre

TV9 Kannada Logo For Webstory First Slide

ಚಳಿಗಾಲವು ಒಣ ತ್ವಚೆಯ ಸಮಸ್ಯೆಯನ್ನು ತರುತ್ತದೆ. ಈ ಋತುವಿನಲ್ಲಿ ಒಣ ಚರ್ಮಕ್ಕೆ ಕಾರಣವಾಗುವ ಕಾರಣಗಳ ಬಗ್ಗೆ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ತ್ವಚೆಯ ಕಾಳಜಿ

ನಿಮ್ಮ ಚರ್ಮವನ್ನು ಅತಿಯಾಗಿ ಸ್ವಚ್ಛಗೊಳಿಸುವುದರಿಂದ ಅದರ ನೈಸರ್ಗಿಕ ತೇವಾಂಶ ಕಡಿಮೆಯಾಗುತ್ತದೆ. ಇದು ಶುಷ್ಕತೆಗೆ ಕಾರಣವಾಗುತ್ತದೆ.

ಅತಿಯಾಗಿ ಸ್ವಚ್ಛಗೊಳಿಸಬೇಡಿ!

ಸ್ನಾನ ಮಾಡಲು ಕಠಿಣವಾದ, ಸೋಪ್ ಆಧಾರಿತ ಕ್ಲೆನ್ಸರ್‌ಗಳನ್ನು ಬಳಸುವುದನ್ನು ಅವಾಯ್ಡ್ ಮಾಡಿ, ಅದರ ಬದಲಿಗೆ ಸೌಮ್ಯವಾದ, ಪಿಹೆಚ್-ಸಮತೋಲಿತ ಕ್ಲೆನ್ಸರ್‌ಗಳನ್ನು ಆರಿಸಿಕೊಳ್ಳಿ.

ಸೋಪ್ ಬಳಸುವಾಗ ಎಚ್ಚರ

ಚಳಿಯೆಂದು ನಿಮ್ಮ ಮುಖವನ್ನು ಬಿಸಿಯಾದ ನೀರಿನಲ್ಲಿ ತೊಳೆಯಬೇಡಿ. ಉಗುರುಬೆಚ್ಚಗಿನ ನೀರಿನಿಂದ ಮೈ ಹಾಗೂ ಮುಖ ತೊಳೆಯಿರಿ. ಬಿಸಿ ಸ್ನಾನವು ಹಿತವಾದ ಭಾವನೆಯನ್ನು ನೀಡಿದರೂ ಅದು ನಿಮ್ಮ ಚರ್ಮದಿಂದ ನೈಸರ್ಗಿಕ ತೈಲಗಳು ಮತ್ತು ತೇವಾಂಶವನ್ನು ತೆಗೆದುಹಾಕಬಹುದು. ಇದು ಶುಷ್ಕತೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ.

ಬಿಸಿ ನೀರಿನಲ್ಲಿ ಮುಖ ತೊಳೆಯಬೇಡಿ

ಸ್ನಾನವಾದ ನಂತರ ಅಥವಾ ಮುಖ ತೊಳೆದ ನಂತರ ಟವೆಲ್​ನಿಂದ ಗಟ್ಟಿಯಾಗಿ ಉಜ್ಜಿ ಒರೆಸಬೇಡಿ. ಅದರ ಬದಲು ಕಾಟನ್​ ಟವೆಲ್​ನಿಂದ ಮುಖವನ್ನು ನಿಧಾನವಾಗಿ ಒತ್ತಿ ನೀರಿನ ಅಂಶವನ್ನು ತೆಗೆಯಿರಿ.

ಉಜ್ಜಿ ಒರೆಸಬೇಡಿ

ಸ್ನಾನವಾದ ಬಳಿಕ ಮೈಯಲ್ಲಿ ಇನ್ನೂ ಸ್ವಲ್ಪ ತೇವಾಂಶ ಇರುವಾಗಲೇ  ಆ ತೇವಾಂಶವನ್ನು ಲಾಕ್ ಮಾಡಲು ಮಾಯಿಶ್ಚರೈಸರ್ ಹಚ್ಚಿಕೊಳ್ಳಿ. ಇದರಿಂದ ಚರ್ಮ ಒಣಗುವುದನ್ನು ತಡೆಯಬಹುದು. ಮಾಯಿಶ್ಚರೈಸರ್‌ಗಳು ನಿಮ್ಮ ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಶುಷ್ಕತೆಯನ್ನು ತಡೆಯುತ್ತದೆ.

ಮಾಯಿಶ್ಚರೈಸರ್ ಹಚ್ಚಿ

ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಮಾಯಿಶ್ಚರೈಸರ್ ಅನ್ನು ಆರಿಸಿ. ಸೂಕ್ತವಾದ ಜಲಸಂಚಯನವನ್ನು ಒದಗಿಸಲು ಹೈಲುರಾನಿಕ್ ಆಮ್ಲ, ಗ್ಲಿಸರಿನ್, ಸೆರಾಮಿಡ್‌ಗಳು ಮತ್ತು ನೈಸರ್ಗಿಕ ತೈಲಗಳಂತಹ ಪದಾರ್ಥಗಳನ್ನು ಒಳಗೊಂಡ ಮಾಯಿಶ್ಚರೈಸರ್ ಖರೀದಿಸಿ.

ಉತ್ತಮ ಮಾಯಿಶ್ಚರೈಸರ್ ಆರಿಸಿ