ಕರ್ನಾಟಕದಲ್ಲಿದೆ ಏಕೈಕ ಕಪ್ಪು ಮರಳಿನ ಕಡಲ ತೀರ

6 August 2024

Pic credit - pinterest

Sayinanda

ಬೇಸಿಗೆ ರಜಾ ದಿನಗಳಲ್ಲಿ ಅಥವಾ ವಾರಾಂತ್ಯಗಳಲ್ಲಿ ಕಡಲ ತೀರದ ಸೌಂದರ್ಯವನ್ನು ಸವಿಯಲು ಬರುವವರೇ ಹೆಚ್ಚು.

Pic credit - pinterest

ಸಾಮಾನ್ಯವಾಗಿ ಬೀಚ್ ಗೆ ತೆರಳಿದಾಗ ಅಲ್ಲಿ ಬಂಗಾರ ವರ್ಣದ ಮರಳನ್ನು ನೋಡಿರುತ್ತೇವೆ.

Pic credit - pinterest

ಕರ್ನಾಟಕದ ಈ ಕಡಲ ತೀರದ ವಿಶೇಷತೆಯೇ ಇಲ್ಲಿನ ಮರಳು ಎನ್ನಬಹುದು.

Pic credit - pinterest

ಕಾರವಾರದ ತಿಲ್ ಮಾಟಿ ಕಡಲ ತೀರದಲ್ಲಿ ನೂರು ಮೀ ನಷ್ಟು ಉದ್ದದವರೆಗೂ ಮರಳು  ಕಪ್ಪು ಬಣ್ಣದಿಂದ ಕೂಡಿದ್ದು, ಎಳ್ಳಿನ ಆಕಾರದಲ್ಲಿರುವುದೇ ವಿಶೇಷ.

Pic credit - pinterest

ಕಾರವಾರದ ಈ ತಿಲ್ ಮಾಟಿ ಕಡಲ ತೀರವು ಕಪ್ಪು ಮರಳಿನ ಬೀಚ್ ಎಂದೇ ಹೆಸರು ವಾಸಿಯಾಗಿದೆ.

Pic credit - pinterest

ಮರಾಠಿ ಅಥವಾ ಕೊಂಕಣಿಯಲ್ಲಿ ತಿಲ್ ಎಂದರೆ ಎಳ್ಳು, ಮಾಟಿ ಎಂದರೆ ಮರುಳು. ಹೀಗಾಗಿ ಈ ಕಡಲ ತೀರಕ್ಕೆ ತಿಲ್ ಮಾಟಿ ಕಡಲ ತೀರ ಎಂಬ ಹೆಸರು ಬಂದಿದೆ.

Pic credit - pinterest

ಕಾರವಾರದಿಂದ ಸುಮಾರು 14 ಕಿ.ಮೀ ದೂರದಲ್ಲಿದ್ದು ಮಜಲಿಯಿಂದ ಒಂದು ಕಿ.ಮೀ ಚಾರಣದ ಮಾಡುವ ಮೂಲಕ ಕಡಲ ತೀರವನ್ನು ತಲುಪಬಹುದು.

Pic credit - pinterest