26 February 2025
Gangadhar Saboji
ಸುಳ್ಳು ಸಾಕ್ಷಿ ಹೇಳಿದ ಪತ್ರ ಬರಹಗಾರನಿಗೆ 3 ವರ್ಷ ಜೈಲು, 10 ಸಾವಿರ ರೂ ದಂಡ
ಸುಳ್ಳು ಸಾಕ್ಷಿ ಹೇಳಿದ ಪಾವಗಡದ ಪತ್ರ ಬರಹಗಾರ ಸುಬ್ಬರಾಯಪ್ಪಗೆ 3 ವರ್ಷ ಜೈಲು, 10 ಸಾವಿರ ರೂ. ದಂಡ ವಿಧಿಸಿ ಪಾವಗಡ ಕೋರ್ಟ್ ಆದೇಶಿಸಿದೆ.
ಪಾವಗಡ ಹೆಚ್ಚುವರಿ ಸಿವಿಲ್, ಜಿಎಂಎಫ್ಸಿ ಕೋರ್ಟ್ ಜಡ್ಜ್ ಬಿ.ಪ್ರಿಯಾಂಕಾ ಆದೇಶ ಹೊರಡಿಸಿದ್ದಾರೆ.
ಸಿವಿಲ್ ಪ್ರಕರಣದ ಮುಖ್ಯ ವಿಚಾರಣೆ ವೇಳೆ ಕರಾರು ಪತ್ರ ಬರೆದ ಬಗ್ಗೆ ಸಾಕ್ಷಿಯಾಗಿ ಸುಬ್ಬರಾಯಪ್ಪ ಸಹಿ ಹಾಕಿದ್ದರು.
31 ಸಾವಿರ ರೂ. ವ್ಯವಹಾರ ನಡೆದಿತ್ತು ಎಂದು ಸಹಿ ಹಾಕಲಾಗಿತ್ತು. ಆದರೆ ಕೋರ್ಟ್ ವಿಚಾರಣೆ ವೇಳೆ ಹಣದ ವ್ಯವಹಾರ ನಡೆದಿಲ್ಲ ಎಂದು ಸಾಬೀತಾಗಿದೆ.
ಈ ಹಿನ್ನೆಲೆ ಕೋರ್ಟ್ ಸ್ವಯಂ ಕೇಸ್ ದಾಖಲಿಸಿಕೊಂಡು ಶಿಕ್ಷೆ ಪ್ರಕಟಿಸಿದೆ.
ಸರ್ಕಾರದ ಪರ ವಕೀಲ ಸಣ್ಣೀರಪ್ಪ ವಾದ ಮಂಡಿಸಿದ್ದಾರೆ.
ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಗ್ರೇನ್ ಕಡಿಮೆ ಮಾಡಿಕೊಳ್ಳಲು ಈ ಬೀಜಗಳ ಸೇವನೆ ಮಾಡಿ
Learn more