ಕಾರವಾರ-ಮಡಗಾಂವ್ ರೈಲು ಐದು ದಿನ ಸ್ಥಗಿತ

15 Dec 2023

Author: Rakesh Nayak Manchi

Pic: gettyimages

ರೈಲು ಹಳಿ ದುರಸ್ತಿ ಹಿನ್ನೆಲೆ ಕಾರವಾರ ಮತ್ತು ಗೋವಾದ ಮಡಗಾಂವ್ ಸಂಪರ್ಕಿಸುವ ವಿಶೇಷ ರೈಲು ಡಿಸೆಂಬರ್ 17 ರಿಂದ ಐದು ದಿನಗಳ ಕಾಲ ಸ್ಥಗಿತಗೊಳ್ಳಲಿದೆ.

Pic: gettyimages

ಈ ಬಗ್ಗೆ ಕೊಂಕಣ ರೈಲ್ವೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.

Pic: gettyimages

ಡಿ.17 ರಿಂದ 21ರ ವರೆಗೆ ಸ್ಥಗಿತಗೊಳ್ಳಲಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Pic: gettyimages

ಕಾರವಾರದಿಂದ ಮಡಗಾಂವ್ ಜಂಕ್ಷನ್‍ಗೆ ಸಾಗುವ ರೈಲು (01595) ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

Pic: gettyimages

ಮಡಗಾಂವ್​ದಿಂದ ಕಾರವಾರ ಜಂಕ್ಷನ್‍ಗೆ ಬರುವ (01596) ರೈಲು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ.

Pic: gettyimages

ಬೆಂಗಳೂರಿನಿಂದ ಕಾರವಾರಕ್ಕೆ ಬರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಕ್ಸಪ್ರೆಸ್ ಮತ್ತು ಪಂಚಗಂಗಾ ಎಕ್ಸಪ್ರೆಸ್ ರೈಲುಗಳು ಹಾಸನ ಬಳಿಯ ರೈಲು ಹಳಿ ದುರಸ್ತಿ ಕಾರಣಕ್ಕೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ.

Pic: gettyimages

ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

Pic: gettyimages