ಮನೆಯ ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಲು ವಾಸ್ತು ಟಿಪ್ಸ್ ಪಾಲಿಸಿ
ಮನೆಯ ದ್ವಾರದಿಂದ ಹಿಡಿದು ಅಡುಗೆ ಮನೆಯಲ್ಲಿ ಇಡುವ ವಸ್ತುಗಳವರೆಗೆ ಎಲ್ಲದರಲ್ಲೂ ವಾಸ್ತು ಶಾಸ್ತ್ರ ಮುಖ್ಯ.
ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಬೇಕಾದರೆ ಈ ಟಿಪ್ಸ್ ಫಾಲೋ ಮಾಡಿ.
ಮನೆಯ ಪ್ರವೇಶ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳಿ.
ಮನೆಯ ಒಳಾಂಗಣ ಗೋಡೆಯ ವಿನ್ಯಾಸದಲ್ಲಿ ಹಳದಿ ಬಣ್ಣವನ್ನು ಬಳಸಿ.
ದು:ಖವನ್ನು ಬಿಂಬಿಸುವಂತಹ ಕಲಾಕೃತಿಗಳನ್ನು ಮನೆಯೊಳಗೆ ಇಡಬೇಡಿ.
ಸೂರ್ಯನ ಬೆಳಕು ಮನೆಯೊಳಗೆ ಬೀಳುವಂತೆ ಕಿಟಕಿಗಳ ಬಾಗಿಲುಗಳನ್ನು ತೆಗೆದಿಡಿ.
ಈಶಾನ್ಯ ದಿಕ್ಕಿನಲ್ಲಿ ದೇವರ ಕೋಣೆಯಿರಲಿ.
ಮನೆಯ ಪ್ರತಿ ಮೂಲೆಯಲ್ಲಿ ಉಪ್ಪನ್ನು ಸ್ಪಲ್ಪ ಹಾಕಿಡಿ.
ಮನೆಯ ಸುತ್ತಲೂ ಕಿತ್ತಳೆಯ ಸಾರಯುಕ್ತ ತೈಲ ಸಿಂಪಡಿಸಿ. ಸಿಟ್ರಸ್ ಪರಿಮಳವು ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.