ಕೊಹ್ಲಿಯ ಘರ್ಜನೆಗೆ ದಾಖಲೆಗಳು ಧೂಳಿಪಟ

12-09-2023

ಏಷ್ಯಾಕಪ್​ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಲವು ದಾಖಲೆ ನಿರ್ಮಿಸಿದ್ದಾರೆ.

ಕೊಹ್ಲಿ ದಾಖಲೆ

ಕೇವಲ 94 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ ವಿರಾಟ್ ಕೊಹ್ಲಿ ಅಜೇಯ 122 ರನ್ ಚಚ್ಚಿದರು.

ಅಜೇಯ 122 ರನ್

ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್​ನಲ್ಲಿ 13 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದ್ದಾರೆ. ಅದು ಕೂಡ ಅತೀ ವೇಗವಾಗಿ ಎಂಬುದು ವಿಶೇಷ.

13 ಸಾವಿರ ರನ್

ಸಚಿನ್ 13,000 ರನ್ ಪೂರೈಸಲು 321 ಏಕದಿನ ಇನಿಂಗ್ಸ್ ತೆಗೆದುಕೊಂಡಿದ್ದರು. ಇದೀಗ ಕೊಹ್ಲಿ ಕೇವಲ 267 ಏಕದಿನ ಇನಿಂಗ್ಸ್​ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಸಚಿನ್ ದಾಖಲೆ ಉಡೀಸ್

ಏಕದಿನದಲ್ಲಿ ವೇಗವಾಗಿ 8000, 9000, 10000, 11000, 12000 ರನ್ ಕಲೆಹಾಕಿದ ವಿಶ್ವ ದಾಖಲೆ ಹೊಂದಿದ್ದ ಕೊಹ್ಲಿ ಇದೀಗ 13000 ರನ್​ಗಳನ್ನು ಅದೇ ವೇಗದಲ್ಲಿ ಪೂರೈಸಿದ್ದಾರೆ.

ಯಾರೂ ಮಾಡಿರದ ಸಾಧನೆ

ಏಷ್ಯಾಕಪ್ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ರನ್​ಗಳ ಜೊತೆಯಾಟ ಆಡಿದ ಜೋಡಿ ಈಗ ಕೊಹ್ಲಿ-ರಾಹುಲ್ ಆಗಿದ್ದಾರೆ (233 ರನ್​ಗಳ ಜೊತೆಯಾಟ).

ಗರಿಷ್ಠ ಜೊತೆಯಾಟ

ಏಷ್ಯಾಕಪ್'ನ ಸೂಪರ್-4ನ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ 228 ರನ್'ಗಳ ಭರ್ಜರಿ ಜಯ ಸಾಧಿಸಿತು.

ಭಾರತಕ್ಕೆ ಜಯ

ಏಷ್ಯಾಕಪ್ ಇತಿಹಾಸದಲ್ಲಿ ಅಧಿಕ ಅರ್ಧಶತಕ ಸಿಡಿಸಿದ ಟಾಪ್ 10ಬ್ಯಾಟರ್'ಗಳ ಪಟ್ಟಿ ಇಲ್ಲಿದೆ.