‘ವಿಶ್ವಕರ್ಮ’ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ ಮೋದಿ

17  September, 2023

'ವಿಶ್ವಕರ್ಮ ಜಯಂತಿ’ಯ ಪ್ರಯುಕ್ತ ಕುಶಲಕರ್ಮಿಗಳ ಅನುಕೂಲಕ್ಕಾಗಿ ‘ಪಿಎಂ ವಿಶ್ವಕರ್ಮ’ ಯೋಜನೆಗೆ ಚಾಲನೆ

‘ಪಿಎಂ ವಿಶ್ವಕರ್ಮ’

ಭಗವಾನ್ ವಿಶ್ವಕರ್ಮರಿಗೆ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ.

ಮೋದಿ ನಮನ

ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಸರ್ಕಾರ ತರಬೇತಿ, ಸಾಲ ಒದಗಿಸಲಿದೆ.

ವಿಶ್ವಕರ್ಮ ಯೋಜನೆ

ಕರಕುಶಲತೆಯಲ್ಲಿ ತೊಡಗಿರುವವರು ಪಿಎಂ ವಿಶ್ವಕರ್ಮ ಯೋಜನೆಯ ಪೋರ್ಟಲ್ ನಲ್ಲಿ ಬಯೋಮೆಟ್ರಿಕ್ ನೋಂದಣಿ ಮಾಡಿಕೊಳ್ಳಬೇಕು.

ನೋಂದಣಿ

ಈ ಯೋಜನೆಯಡಿ ಸರ್ಕಾರವು ಯಾವುದೇ (ಬ್ಯಾಂಕ್) ಗ್ಯಾರಂಟಿ ಇಲ್ಲದೆ  3 ಲಕ್ಷದವರೆಗೆ ಸಾಲ ನೀಡಲಿದೆ; ಪ್ರಧಾನಿ ಮೋದಿ

ಮೋದಿ ಭಾಷಣ

ನೋಂದಣಿ ಮಾಡಿಕೊಂಡ ನುರಿತ ಕುಶಲಕರ್ಮಿಗಳಿಗೆ ಕೇಂದ್ರ ಸರ್ಕಾರ ಪ್ರಮಾಣ ಪತ್ರ ಮತ್ತು ಗುರುತಿನ ಚೀಟಿ ಒದಗಿಸಲಿದೆ.

‘ಪಿಎಂ ವಿಶ್ವಕರ್ಮ’

ಪ್ರಾಥಮಿಕ ತರಬೇತಿ  ಹಾಗೂ ತರಬೇತಿ ವೇಳೆ 15 ಸಾವಿರ ರೂಪಾಯಿ ಗೌರವಧನ ನೀಡಿ,ಸ್ವ ಉದ್ಯೋಗ ಪ್ರಾರಂಭಿಸಲು ಸಾಲ ಸೌಲಭ್ಯ ಒದಗಿಸಲಿದೆ.

ಸ್ವ ಉದ್ಯೋಗ

ಅಕ್ಕಸಾಲಿಗರು, ಚಮ್ಮಾರರು ಸೇರಿದಂತೆ  18 ಸಾಂಪ್ರದಾಯಿಕ ಕಲೆಗಳ ಕುಶಲಕರ್ಮಿಗಳು ವಿಶ್ವಕರ್ಮ ಯೋಜನೆಯ ಲಾಭ ಪಡೆಯಬಹುದು.

ಯಾರು ಅರ್ಹರು?

ಮೋದಿ ಹುಟ್ಟುಹಬ್ಬಕ್ಕೆ ಸಂಸ್ಕೃತದಲ್ಲಿ ಶುಭಾಶಯ ಕೋರಿದ ಯುವತಿ