ಕಿಡ್ನಿ ಸ್ಟೋನ್ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ

 ಮೂತ್ರಪಿಂಡದಲ್ಲಿ ಕಲ್ಲು ಅಥವಾ ಕಿಡ್ನಿ ಸ್ಟೋನ್​ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ.

ಈ ಸಮಸ್ಯೆ ಕಾಡ ತೊಡಗಿದಾಗ ಹೊಟ್ಟೆ ಅಥವಾ ಕಿಬ್ಬೊಟ್ಟೆಯಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.

ಇದಲ್ಲದೇ ಕಿಡ್ನಿ ಸ್ಟೋನ್​​​ನ ಮತ್ತೊಂದು ಲಕ್ಷಣವೆಂದರೆ ಪಕ್ಕೆಲುಬುಗಳಲ್ಲಿ ನೋವು.

ಮೂತ್ರ ವಿಸರ್ಜನೆಗೆ ಕಷ್ಟವಾಗುವುದು,ವಾಕರಿಕೆ,ಜ್ವರ ಮತ್ತು ಶೀತ ಮುಂತಾದ ಲಕ್ಷಣಗಳು ಕಂಡು ಬಂದರೆ ಎಂದಿಗೂ ನಿರ್ಲಕ್ಷ್ಯಬೇಡ.

ಸಾಕಷ್ಟು ನೀರು ಕುಡಿಯುವುದರಿಂದ ಮೂತ್ರಪಿಂಡದಲ್ಲಿ ಹುಟ್ಟಿಕೊಂಡ ಕಲ್ಲುಗಳು ಕರಗುತ್ತವೆ.

ಇದಲ್ಲದೇ ಸಿಟ್ರಸ್​ ಅಂಶ ಹೊಂದಿರುವ ತಂಪು ಪಾನೀಯ ಅಥವಾ ಜ್ಯೂಸ್ ​ಅನ್ನು ಸೇವಿಸಬಹುದು.

ರೋಗ ಬಂದಾಗ ಮಾತ್ರ ಚಿಂತಿಸದೇ,ರೋಗ ಬಾರದಂತೆ ಆರೋಗ್ಯ ಕ್ರಮವನ್ನು ಬದಲಾಯಿಸಿಕೊಳ್ಳುವುದು ಉತ್ತಮ.