ತಲೆನೋವು ಬಂದಾಗಲೆಲ್ಲಾ ಮಾತ್ರೆ ನುಂಗುವ ಅಭ್ಯಾಸ ನಿಮಗಿದೆಯಾ?
ತಲೆ ನೋವು ಅನೇಕ ಕಾರಣಗಳಿಂದ ಬರಬಹುದು. ಆದರೆ ಪ್ರತಿ ಬಾರಿ ಮಾತ್ರೆ ನುಂಗುವುದು ದೇಹಕ್ಕೆ ಒಳ್ಳೆಯದೂ ಅಲ್ಲ.
ಅನೇಕ ಬಾರಿ ಬಿಸಿಲು, ಶಾಖ, ಚಳಿ, ಶಬ್ದ ಇತ್ಯಾದಿಗಳಿಂದಾಗಿ ತೀವ್ರ ತಲೆನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಬಹುತೇಕ ಮಂದಿ ತಲೆನೋವನ್ನು ಸಹಿಸಿಕೊಳ್ಳಲಾರದೇ ತಲೆನೋವು ಹೋಗಲಾಡಿಸುವ ಮಾತ್ರೆಗಳನ್ನು ನುಂಗುತ್ತಾರೆ.
ಆದರೆ ಆ ಕ್ಷಣಕ್ಕೆ ನೋವನ್ನು ಕಡಿಮೆ ಮಾಡುವ ಪೇನ್ ಕಿಲ್ಲರ್ ಮಾತ್ರೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನುಂಟು ಮಾಡಬಹುದು.
ಪದೇ ಪದೇ ತಲೆ ನೋವಿಗೆ ಮಾತ್ರೆ ನುಂಗುವುದು ಮೆದುಳಿನ ನರಗಳಿಗೆ ಹಾನಿಯುಂಟು ಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ.
ಆದ್ದರಿಂದ ತಲೆನೋವಿಗೆ ಆರ್ಯುವೇದದ ಔಷಧಿಗಳು ಅಥವಾ ಮನೆ ಮದ್ದುಗಳನ್ನು ಬಳಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ತುಳಸಿ ಚಹಾ, ಕರಿಮೆಣಸು ಮತ್ತು ಪುದೀನ ಚಹಾಗಳನ್ನು ಕುಡಿಯುವುದು ತಲೆ ನೋವಿನ ಸಮಸ್ಯೆಯನ್ನು ನಿವಾರಿಸುವಲ್ಲಿ ಸಹಾಯಕವಾಗಿದೆ.
ಮತ್ತಷ್ಟು ಓದಿ: