11 June 2024

ಪವಿತ್ರ ಗೌಡ ಯಾರು? ದರ್ಶನ್ ಹಾಗೂ ಪವಿತ್ರಾ ಪರಿಚಯ ಹೇಗೆ?

Pic Credit -Instagram 

Author :Akshatha Vorkady

ಪವಿತ್ರ ಗೌಡ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸಿನಲ್ಲಿ ದರ್ಶನ್ ಅರೆಸ್ಟ್ ಆಗಿದ್ದು, ಈ ಕೇಸ್‌ನಲ್ಲಿ ಪವಿತ್ರ ಗೌಡ ಹೆಸರನ್ನ ಕೂಡ ಎಳೆದು ತರಲಾಗಿದೆ. 

Pic Credit -Instagram 

ದರ್ಶನ್ ಗೆಳತಿ 

ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಗೆಳತಿ ಪವಿತ್ರಾ ಗೌಡರನ್ನು ಆರ್​​.ಆರ್​.ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

Pic Credit -Instagram 

ದರ್ಶನ್ ಹಾಗೂ ಪವಿತ್ರಾ

ಈ ಪವಿತ್ರ ಗೌಡ ಯಾರು, ಆಕೆಯ ಹಿನ್ನೆಲೆ ಏನು? ದರ್ಶನ ಹಾಗೂ ಪವಿತ್ರ ನಡುವೆ ಏನು ಸಂಬಂಧ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 

Pic Credit -Instagram 

ಪವಿತ್ರ ಗೌಡ

ನಟನೆ ಜೊತೆ ಮಾಡಲಿಂಗ್‌ನಲ್ಲೂ ಸೈ ಎನಿಸಿಕೊಂಡಿರುವ ಪವಿತ್ರಾ ಗೌಡ ಕನ್ನಡದ ಛತ್ರಿಗಳು ಸಾರ್ ಛತ್ರಿಗಳು, ಅಗಮ್ಯಾ, ಸಾಗುವ ದಾರಿ ಮುಂತಾದ ಸಿನಿಮಾದಲ್ಲಿ ನಟಿಸಿದ್ದಾರೆ. 

Pic Credit -Instagram 

ಫ್ಯಾಷನ್ ಡಿಸೈನರ್

ಪ್ರೀತಿ ಕಿತಾಬು ಸಿನಿಮಾ ನಟಿ ಪವಿತ್ರಾ ಗೌಡಗೆ ಖ್ಯಾತಿ ತಂದುಕೊಟ್ಟ ಚಿತ್ರ.  ಸದ್ಯ ಪವಿತ್ರಾ ಗೌಡ ಫ್ಯಾಷನ್ ಡಿಸೈನರ್ ಆಗಿದ್ದು ಬೋಟಿಕ್ ನಡೆಸುತ್ತಿದ್ದಾರೆ. 

Pic Credit -Instagram 

ಕಾಲಿವುಡ್‌ಗೆ ಎಂಟ್ರಿ 

ಕನ್ನಡ ಮಾತ್ರವಲ್ಲದೇ 2016 ರಲ್ಲಿ "54321" ಚಿತ್ರದ ಮೂಲಕ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಪವಿತ್ರಾ ಗೌಡ. 

Pic Credit -Instagram 

ಆಪ್ತ ಸ್ನೇಹ

ಸಿನಿಮಾ ಕಾರ್ಯಕ್ರಮದಲ್ಲಿ ಒಬ್ಬ ಕಾಮನ್ ಫ್ರೆಂಡ್​ನಿಂದಾಗಿ ದರ್ಶನ್ ಹಾಗೂ ಪವಿತ್ರಾ ಪರಿಚಯ ಆಯಿತು ಎನ್ನಲಾಗುತ್ತದೆ. ಈ ಪರಿಚಯ ಆಪ್ತ ಸ್ನೇಹಕ್ಕೆ ತಿರುಗಿದೆ.

Pic Credit -Instagram 

ಸೋಶಿಯಲ್​​​ ಮೀಡಿಯಾ

ಇತ್ತೀಚಿಗಷ್ಟೇ ದರ್ಶನ್​ ಜತೆ 10 ವರ್ಷದಿಂದ ಖುಷಿಯಾಗಿದ್ದೇನೆ ಎಂದು ಸೋಶಿಯಲ್​​​ ಮೀಡಿಯಾದಲ್ಲಿ ಕೆಲ ಫೋಟೋ ಹಂಚಿಕೊಂಡಿದ್ದ ಪವಿತ್ರಾ ಗೌಡ.

Pic Credit -Instagram 

ಸಂಜಯ್ ಸಿಂಗ್

ಅಂದಹಾಗೆ ಪವಿತ್ರಾ ಗೌಡ ಪತಿ ಹೆಸರು ಸಂಜಯ್ ಸಿಂಗ್ ಎಂದಾಗಿದ್ದು, ಪವಿತ್ರಾ ಹಾಗೂ ಸಂಜಯ್ ಹಲವು ವರ್ಷಗಳಿಂದ ಪರಸ್ಪರ ದೂರವೇ ಇದ್ದಾರೆ. 

Pic Credit -Instagram