ಭೋಪಾಲ್ ಅನಿಲ ದುರಂತದ ನೆನಪಿಗಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಣೆ

ಭೋಪಾಲ್ ಅನಿಲ ದುರಂತದ ನೆನಪಿಗಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಣೆ

1 December 2023

Author: akshay pallamjalu 

TV9 Kannada Logo For Webstory First Slide (1)
ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು  ಆಚರಿಸಲಾಗುತ್ತದೆ.

ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಭಾರತದಲ್ಲಿ ಪ್ರತಿವರ್ಷ ಡಿಸೆಂಬರ್ 2 ರಂದು ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನು  ಆಚರಿಸಲಾಗುತ್ತದೆ.

ಮಾಲಿನ್ಯವು ನಮ್ಮ ಪರಿಸರ ಮತ್ತು ಮಾನವರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ.

ಮಾಲಿನ್ಯವು ನಮ್ಮ ಪರಿಸರ ಮತ್ತು ಮಾನವರ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತದೆ. 

ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ ಪ್ರಪಂಚದಾದ್ಯಂತ ಪ್ರತಿವರ್ಷ 7 ಮಿಲಿಯನ್ ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ.

ಭಾರತದ ರಾಷ್ಟ್ರೀಯ ಆರೋಗ್ಯ ಪೋರ್ಟಲ್ ಪ್ರಕಾರ ಪ್ರಪಂಚದಾದ್ಯಂತ ಪ್ರತಿವರ್ಷ 7 ಮಿಲಿಯನ್ ಜನರು ವಾಯು ಮಾಲಿನ್ಯದಿಂದ ಸಾಯುತ್ತಿದ್ದಾರೆ.

ಡಿಸೆಂಬರ್ 2, 1984 ರಂದು ಭೋಪಾಲ್ ನ  ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ನ (UCIL) ಕೀಟನಾಶಕ ಸ್ಥಾವರದಿಂದ ʼಮೀಥೈಲ್ ಐಸೊಸೈನೇಟ್ʼ ಅನಿಲ ಸೋರಿಕೆಯಿಂದಾಗಿ ಸಾವಿರಾರು ಜನರು ಸಾವನ್ನಪ್ಪಿದರು.

ಭಾರತದಲ್ಲಿ ಪ್ರತಿವರ್ಷ 24 ಲಕ್ಷ ಜನರು ಮಾಲಿನ್ಯದ ಕಾರಣದಿಂದ ಸಾಯುತ್ತಿದ್ದಾರೆ. ಈ ಅಂಕಿಂಶದಿಂದ  ಭಾರತದಲ್ಲಿ ಮಾಲಿನ್ಯವು ಎಷ್ಟು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂಬುದನ್ನು ತಿಳಿಯಬಹುದು.

ಈ ಪೈಕಿ 16.7 ಲಕ್ಷ ಸಾವುಗಳು ವಾಯು ಮಾಲಿನ್ಯದಿಂದಲೇ ಸಂಭವಿಸಿದೆ. ಅಷ್ಟೇ ಅಲ್ಲದೇ ಈ ಮಾಲಿನ್ಯದ ಕಾರಣದಿಂದಾಗಿ  ಜೀವರಾಶಿಗಳು ಅನೇಕ ತೊಂದರೆಗಳನ್ನು ಅನುಭವಿಸುತ್ತಿವೆ.

ಈ ದಿನವು  ನಮ್ಮ ಪರಿಸರದ ಮೇಲೆ ಮಾಲಿನ್ಯದ ವಿನಾಶಕಾರಿ ಪರಿಣಾಮಗಳು ಮತ್ತು ಅದರ ಪರಿಣಾಮಕಾರಿ ನಿಯಂತ್ರಣ  ಕ್ರಮಗಳ  ಅಗತ್ಯತೆಯ ಬಗ್ಗೆ ಜಾಗೃತಿ ಮೂಡಿಸುತ್ತದೆ.  

ಮಾಲಿನ್ಯದ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ  ಯಾವುದೇ ರೀತಿಯ ಕೈಗಾರಿಕಾ ವಿಪತ್ತುಗಳು ಸಂಭವಿಸದಂತೆ ತಡೆಯಲು ಕೈಗಾರಿಕ ವಿಪತ್ತು ನಿರ್ವಹಣೆ ಮತ್ತು ಅದರ ನಿಯಂತ್ರಣದ ಬಗ್ಗೆ  ಸಾರ್ವಜನಿಕರಿಗೆ ಶಿಕ್ಷಣವನ್ನು ನೀಡಲಾಗುತ್ತದೆ.