World AIDS Day 2023: ವಿಶ್ವ ಏಡ್ಸ್ ದಿನದ  ಇತಿಹಾಸ, ಮಹತ್ವ

30 November 2023

Author: akshay pallamajalu 

ಏಡ್ಸ್ ಗುಣಪಡಿಸಲಾಗದ ಹಾಗೂ ಗಂಭೀರ ಕಾಯಿಲೆಯಾಗಿದ್ದು, ಇದು ಪ್ರಪಂಚದಾದ್ಯಂತ ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ. 

ಮಾರಣಾಂತಿಕ  ರೋಗದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ಧೇಶದಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ.  

ವಿಶ್ವ ಏಡ್ಸ್ ದಿನವನ್ನು ಮೊದಲ ಬಾರಿಗೆ 1988 ರಲ್ಲಿ ಆಚರಿಸಲಾಯಿತು. 1981 ರಲ್ಲಿ ಮೊದಲ ಏಡ್ಸ್ ಪ್ರಕರಣ ವರದಿಯಾದ ನಂತರ,  ಸುಮಾರು 25 ಮಿಲಿಯನ್ ಜನರು ಈ ಕಾಯಿಲೆಗೆ ತುತ್ತಾಗಿ ಪ್ರಾಣವನ್ನು ಕಳೆದುಕೊಂಡರು.

ಈ ಮಾರಣಾಂತಿಕ ಕಾಯಿಲೆಯ ಬಗ್ಗೆ ಜನರಿಗೆ ಅರಿವು ಮೂಡಿಸಬೇಕೆನ್ನುವ ಸಲುವಾಗಿ 1987 ರಲ್ಲಿ ಥಾಮಸ್ ನೆಟ್ಟರ್ ಮತ್ತು ಜೇಮ್ಸ್ ಡಬ್ಲ್ಯೂ ಬನ್ ಅವರು ಏಡ್ಸ್ ದಿನವನ್ನು ಆಚರಿಸುವ ಪರಿಕಲ್ಪನೆಯನ್ನು ಜಾರಿಗೆ ತಂದರು.  

1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು  ಈ ದಿನವನ್ನು ವಿಶ್ವ ಮಟ್ಟದಲ್ಲಿ ಆಚರಿಸಲು ಘೋಷಿಸಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತಿದೆ.

ಪ್ರತಿವರ್ಷ ಡಿಸೆಂಬರ್ 1 ರಂದು ವಿಶ್ವದಾದ್ಯಂತ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಆಚರಿಸುವ ಮುಖ್ಯ ಉದ್ದೇಶವೆಂದರೆ ಈ ರೋಗದ ಹರಡುವಿಕೆ ಮತ್ತು ಅದರ ತಡೆಗಟ್ಟುವಿಕೆಯ  ಬಗ್ಗೆ ಜನರಿಗೆ ಅರಿವು ಮೂಡಿಸುವುದಾಗಿದೆ. 

ಏಡ್ಸ್ ರೋಗದ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ಈ ರೋಗಕ್ಕೆ ತುತ್ತಾದವರು  ಸಮಾಜದಲ್ಲಿ ತಾರತಮ್ಯವಿಲ್ಲದೆ ಸುರಕ್ಷಿತ ಜೀವನ ನಡೆಸುಬೇಕು.

ಈ ದಿನ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಮೂಲಕ ಜನರಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತದೆ.