ಮಿಚಾಂಗ್ ಚಂಡಮಾರುತ  ಕರ್ನಾಟಕದ ಮೇಲೆ‌ ಎಫೆಕ್ಟ್ ಆಗುತ್ತಾ? ಹವಾಮಾನ ತಜ್ಞರು ಹೇಳೋದೇನು?

04-12-2023

Author: Ayesha

ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕುಸಿತವಾಗಿದ್ದು ಅದು ಮಿಚಾಂಗ್ ಚಂಡಮಾರುತವಾಗಿ ಬದಲಾಗಿದೆ ಎಂದು ಹವಾಮಾನ ಇಲಾಖೆ ತಜ್ಞ ಎ ಪ್ರಸಾದ್  ಮಾಹಿತಿ ನೀಡಿದ್ದಾರೆ.

ಮಿಚಾಂಗ್ ಎನ್ನುವ ಹೆಸರನ್ನ ಬಾಂಗ್ಲಾ ದೇಶ ಹೆಸರಿಸಿದ್ದು ಈ ಮಿಚಾಂಗ್ ಚಂಡಮಾರುತ ಬೆಳಗ್ಗೆ 8 ಗಂಟೆಯ ಸುಮಾರಿಗೆ ತೀವ್ರವಾಗಿದೆ.

ಇದು ಚೆನ್ನೈನಿಂದ 90 ಕಿಲೋ ಮೀಟರ್ ವರೆಗೂ ಇರಲಿದೆ. ಇದರಿಂದ ನಮ್ಮ ರಾಜ್ಯಕ್ಕೆ ಯಾವುದೇ ಪ್ರಭಾವವಿಲ್ಲ. ಆದರೆ ಮೋಡ ಕವಿದ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಚಂಡಮಾರುತ ಯಾವ ದಿಕ್ಕಿನಲ್ಲಿ ಬರುತ್ತದೆಯೋ ಅಲ್ಲಿ ಮಳೆ - ಗಾಳಿ ಇರುತ್ತದೆ. 

ಮಿಚಾಂಗ್ ಚಂಡಮಾರುತ ಸಧ್ಯ ತೀವ್ರ ಚಂಡಮಾರುತವಾಗಿ ಪರಿವರ್ತನೆಯಾಗಿದೆ. ತಮಿಳುನಾಡಿನ ಉತ್ತರ ಭಾಗದ ಚೆನ್ನೈ , ತಿರುವಳ್, ಕಾಂಚಿಪುರಂ ಜಿಲ್ಲೆಗಳಿಗೆ ಅಲರ್ಟ್ ನೀಡಲಾಗಿದೆ.

ದಕ್ಷಿಣ ಆಂಧ್ರ ಪ್ರದೇಶದ ನೆಲ್ಲೂರು, ಕಾವೇಲಿಯವರೆಗೂ ಅಲರ್ಟ್ ನೀಡಿದ್ದು ಇಂದು ಮತ್ತು ನಾಳೆ ಹೆಚ್ಚಿನ ಮಳೆ ಆಗಲಿದೆ. ಕನಿಷ್ಠ ಉಷ್ಣಾಂಶದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ.

ಈ ಕನಿಷ್ಠ ಉಷ್ಣಾಂಶ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ನೆಗಡಿ, ಕೆಮ್ಮಿನಂತಹ ಲಕ್ಷಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಕನಿಷ್ಠ ಉಷ್ಣಾಂಶ ಕಡಿಮೆಯಾಗುವುದಿಲ್ಲ.

ಡಿಸೆಂಬರ್ ತಿಂಗಳಲ್ಲಿ ಮಳೆಯ ಪ್ರಮಾಣ ಕಡಿಮೆ ಇರುತ್ತೆ. ಮಂಡ್ಯ, ಶಿವಮೊಗ್ಗದಲ್ಲಿ ವಾಡಿಕೆ ಮಳೆಯಾಗಲಿದ್ದು ಗಾಳಿ ಪ್ರಮಾಣ ಹೆಚ್ಚಾಗಿ ಇರಲಿದೆ ಎಂದು ಹವಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.