ಭಾರತದ ಉಜ್ವಲ ಭವಿಷ್ಯಕ್ಕಾಗಿ ಯಶೋಭೂಮಿ; ಎನಿದರ ವಿಶೇಷತೆ?

17 September 2023

Pic Credit: Govt

ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನವಾದ ಸೆ. 17ರಂದು ದೆಹಲಿಯ ದ್ವಾರಕಾ ಸೆಕ್ಟರ್ 25ರಲ್ಲಿ ಯಶೋಭೂಮಿ ಉದ್ಘಾಟನೆ ಮಾಡಿದರು.

ಯಶೋಭೂಮಿ ಉದ್ಘಾಟನೆ

Pic Credit: Govt

ಇದು ಇಂಡಿಯಾ ಇಂಟರ್ನ್ಯಾಷನಲ್ ಕನ್ವೆನ್ಷನ್ ಅಂಡ್ ಎಕ್ಸ್​ಪೋ ಸೆಂಟರ್ (ಐಐಸಿಸಿ). ಅಂತಾರಾಷ್ಟ್ರೀಯ ಸಭೆ, ಸಮಾರಂಭ ಆಯೋಜಿಸಲು ಇರುವ ಬೃಹತ್ ಸಂಕೀರ್ಣ.

ಏನಿದು ಯಶೋಭೂಮಿ?

Pic Credit: Govt

ಮುಂದಿನ ಕೆಲ ದಶಕಗಳಲ್ಲಿ ಭಾರತದ ಅಗಾಧ ಆರ್ಥಿಕ ಬೆಳವಣಿಗೆ ನಿರೀಕ್ಷಿಸಿ ಅದರ ಅಗತ್ಯತೆಗಳಿಗೆ ಅನುವಾಗುವ ರೀತಿಯಲ್ಲಿ ವಿಶ್ವದರ್ಜೆಯ ಸಭಾಂಗಣ ಬೇಕಾಗುತ್ತದೆ.

ಯಶೋಭೂಮಿ ಯಾಕೆ?

Pic Credit: Govt

ಯಶೋಭೂಮಿಯನ್ನು 2 ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತ ಮುಗಿದು ಉದ್ಘಾಟನೆ ಅಗಿದೆ. ಎರಡೂ ಹಂತ ಸೇರಿ ಅಂದಾಜು ವೆಚ್ಚ 25,703 ಕೋಟಿ ರೂ.

ಯಶೋಭೂಮಿ ವೆಚ್ಚ

Pic Credit: Govt

ಯಶೋಭೂಮಿಯ ಸಮಗ್ರ ಯೋಜನೆಯನ್ನು ಒಟ್ಟು 221.37 ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಕಟ್ಟಡಗಳ ವಿಸ್ತೀರ್ಣ 1.8 ಲಕ್ಷ ಚ.ಮೀ.ಗೂ ಹೆಚ್ಚು ಇದೆ.

ಯಶೋಭೂಮಿ ಅಗಾಧತೆ

Pic Credit: Govt

ಇದರ ಸಭಾಂಗಣದಲ್ಲಿ 15 ಕನ್ವೆನ್ಷನ್ ರೂಮ್, ಭವ್ಯ ಬಾಲ್​ರೂಮ್, 13 ಮೀಟಿಂಗ್ ರೂಮ್​ಗಳಿವೆ. ಮುಖ್ಯ ಆಡಿಟೋರಿಯಂನಲ್ಲಿ 6,000 ಅತಿಥಿಗಳು ಆಸೀನರಾಗಬಹುದು.

ಬೃಹತ್ ಸಭಾಂಗಣ

Pic Credit: Govt

ಜಿ20 ಶೃಂಗಸಭೆ ನಡೆದದ್ದು ಭಾರತದ ಅತಿದೊಡ್ಡ ಕನ್ವೆನ್ಷನ್ ಸೆಂಟರ್ ಭಾರತ್ ಮಂಟಪಂನಲ್ಲಿ. ಅದರ ಉದ್ಘಾಟನೆ ಜುಲೈ 26ರಂದು ಆಗಿತ್ತು. ಈಗ ಯಶೋಭೂಮಿ ಆ ದಾಖಲೆ ಮುರಿದಿದೆ.

ಭಾರತ್ ಮಂಟಪಂ

Pic Credit: Govt

ಯಶೋಭೂಮಿಯಲ್ಲಿ ಹಲವು ವಿಶೇಷತೆಗಳಿವೆ. ತ್ಯಾಜ್ಯನೀರು ಮರುಬಳಕೆ, ಮಳೆನೀರಿ ಸಂಗ್ರಹಣೆ, ಸೌರಶಕ್ತಿ ಬಳಕೆ ಇತ್ಯಾದಿ ಪರಿಸರಸ್ನೇಹಿ ವ್ಯವಸ್ಥೆ ಇದರಲ್ಲಿದೆ.

ಹತ್ತುಹಲವು ವಿಶೇಷತೆಗಳು

Pic Credit: Govt

ಭಾರತದ ಉಜ್ವಲ ಭವಿಷ್ಯಕ್ಕಾಗಿ ಯಶೋಭೂಮಿ; ಎನಿದರ ವಿಶೇಷತೆ?